ಮಧುಸೂದನ್ ಸೂಡಾ ಅಧ್ಯಕ್ಷ ,ವಿದ್ಯಾರ್ಥಿ ಹೋರಾಟಗಾರನಿಗೆ ಒಲಿದ ಶಿವಮೊಗ್ಗ – ಭದ್ರಾವತಿ ಅಭಿವೃದ್ಧಿ ಪ್ರಾಧಿಕಾರ ಪಟ್ಟಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್, ಪುತ್ರ ಬಿ.ಎಸ್.ಬಸವೇಶ್ ಅತ್ಯಾಪ್ತನಿಗೆ ಒಲಿದ ಮಹತ್ವದ ಸ್ಥಾನ

ಮಧುಸೂದನ್ ಸೂಡಾ ಅಧ್ಯಕ್ಷ ವಿದ್ಯಾರ್ಥಿ ಹೋರಾಟಗಾರನಿಗೆ ಒಲಿದ ಶಿವಮೊಗ್ಗ – ಭದ್ರಾವತಿ ಅಭಿವೃದ್ಧಿ ಪ್ರಾಧಿಕಾರ ಪಟ್ಟ
ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್, ಪುತ್ರ ಬಿ.ಎಸ್.
ಬಸವೇಶ್ ಅತ್ಯಾಪ್ತನಿಗೆ ಒಲಿದ ಮಹತ್ವದ ಸ್ಥಾನ
ಬೆಂಗಳೂರು:
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ನೂತನ ಅಧ್ಯಕ್ಷರಾಗಿ ಯುವ ಮುಖಂಡ ಹಾಗೂ ವಿದ್ಯಾರ್ಥಿ ಹೋರಾಟಗಾರ ಸಿ.ಜಿ. ಮಧುಸೂದನ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ. ಈ ಹಿಂದೆ ಎಚ್.ಎಸ್. ಸುಂದರೇಶ್ ಅವರು ಸೂಡಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ವಿದ್ಯಾರ್ಥಿ ಪರಿಷತ್‌ ನಿಂದ ರಾಜಕೀಯ ಹೆಜ್ಜೆ:
2010 ಸಾಲಿನಿಂದಲೇ ಎನ್‌ಎಸ್‌ ಯುಐ ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸಿ.ಜಿ. ಮಧುಸೂದನ್, ಸಂಘಟನೆಯ ವಿವಿಧ ಹಂತಗಳಲ್ಲಿ ಮುಂಚೂಣಿ ಯಲ್ಲಿ ನಿಂತು ಕೆಲಸ ಮಾಡಿದ್ದರು. ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಶಿವಮೊಗ್ಗ ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಯಶಸ್ವಿಯಾಗಿ
ಸೇವೆ ಸಲ್ಲಿಸಿರುವ ಇವರು, ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಭದ್ರಾವತಿಯ ಕಾಂಗ್ರೆಸ್ ಅವರ ಅತ್ಯಾಪ್ತರಾಗಿರುವ ಮಧುಸೂ ದನ್ ಅವರಿಗೆ, ಇತ್ತೀಚೆಗಷ್ಟೇ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಸಂಯೋ ಜಕರ ಜವಾಬ್ದಾರಿಯನ್ನೂ ನೀಡಲಾಗಿತ್ತು. ಮುಖಂಡ ಬಿ.ಎಸ್. ಬಸವೇಶ್ ಶಿವಮೊಗ್ಗ ಸೇರಿದಂತೆ ರಾಜ್ಯದ 11 ಪ್ರಮುಖ
ಮೇಲ್ವಿಚಾರಣೆ ವಹಿಸಲಾಗಿತ್ತು. ಜಿಲ್ಲೆಗಳಲ್ಲಿ ಭಾರತ ಜೋಡೋ ಯುವ ಸಂಘಗಳ ರಚನೆ ಹಾಗೂ ಸಂಘಟನಾ ಚಟುವಟಿಕೆಗಳ
ಪ್ರಸ್ತುತ ಇವರ ದೀರ್ಘಕಾಲದ ಸಂಘಟನಾ ಸೇವೆಯನ್ನು ಗುರುತಿಸಿ ಸರ್ಕಾರವು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟ್ಟವನ್ನು ನೀಡಿದ್ದು, ಸ್ಥಳೀಯ ಕಾಂಗ್ರೆಸ್ ವಲಯದಲ್ಲಿ ಹಾಗೂ ಅಭಿಮಾನಿಗಳಲ್ಲಿ ಮೂಡಿಸಿದೆ.

Leave a Reply

Your email address will not be published. Required fields are marked *