ಹಿರಿಯ ವಕೀಲರಾದ ಬಸಪ್ಪ ಗೌಡ ಅವರಿಗೆ ವಕೀಲ ಭೂಷಣ ಪ್ರಶಸ್ತಿ ಪ್ರದಾನ

ಹಿರಿಯ ವಕೀಲರಾದ ಬಸಪ್ಪ ಗೌಡ ಅವರಿಗೆ ವಕೀಲ ಭೂಷಣ ಪ್ರಶಸ್ತಿ ಪ್ರದಾನ

ಬೆಂಗಳೂರು: ಬೆಂಗಳೂರಿನ ಹೈಕೋರ್ಟ್‌ನ 2ನೇ ಮಹಡಿ ಯಲ್ಲಿರುವ ಪ್ಯಾಟ್ರನ್ -ಇನ್-ಚೀಫ್ ಸಭಾಂಗಣದಲ್ಲಿ ಗುರುವಾರ ಶಿವಮೊಗ್ಗದ ಹಿರಿಯ ಬಸಪ್ಪ ಗೌಡ ಅವರಿಗೆ ವಕೀಲ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ಹೈಕೋರ್ಟ್ನ ಮುಖ್ಯ ಮೂರ್ತಿಗಳಾದ ಗೌರವಾನ್ವಿತ ನ್ಯಾಯಮೂರ್ತಿ ವಿಭು ಬಕ್ರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೈಕೋರ್ಟ್ ನ್ಯಾಯ ಮೂರ್ತಿ ಗಳಾದ ಗೌರವಾನ್ವಿತ ಸೂರಜ್ ಗೋವಿಂದರಾಜ್ ಹಾಗೂ ಗೌರವಾನ್ವಿತ ಕೆ.ಎಸ್. ಹೇಮಲೇಖಾ ಭಾಗವಹಿಸಿದ್ದರು.

ಕರ್ನಾಟಕ ಸರ್ಕಾರದ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹೈಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ಹಾ ಗೂ ಹಿರಿಯ ವಕೀಲರಾದ ಕೆ. ಅರವಿಂದ್ ಕಾಮತ್ ಹಾಜರಿದ್ದ ದರು. ಕರ್ನಾಟಕದ ಮಾಜಿ ಅಡ್ವಕೇಟ್ ಜನರಲ್ ಹಾಗೂ ಹಿರಿಯ ವಕೀಲರಾದ ಉದಯ್ ಹೊಲ್ಲಾ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾನೂನು ಕ್ಷೇತ್ರದ ಹಲವು ಗಣ್ಯರು, ನ್ಯಾಯವಾದಿಗಳು ಹಾಗೂ ಆಹ್ವಾನಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *