ಖ್ಯಾತ ಚಿತ್ರನಟ ಶ್ರೀನಾಥ್‌ರಿಂದ ಶಿವಮೊಗ್ಗ ದಸರಾಕ್ಕೆ ನಾಳೆ ಚಾಲನೆ

ಖ್ಯಾತ ಚಿತ್ರನಟ ಶ್ರೀನಾಥ್‌ರಿಂದ ಶಿವಮೊಗ್ಗ ದಸರಾಕ್ಕೆ ನಾಳೆ ಚಾಲನೆ
ಶಿವಮೊಗ್ಗ:-ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ-2026 ಕಾರ್ಯಕ್ರಮಕ್ಕೆ ಅ. 11ರ ಭಾನುವಾರ (ನಾಳೆ) ಬೆಳಿಗ್ಗೆ 11 ಗಂಟೆಗೆ ಕೋಟೆಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಮೂಲಕ
ಚಾಲನೆ ದೊರೆಯಲಿದೆ.
ಕನ್ನಡ ಚಿತ್ರರಂಗದ ಖ್ಯಾತ ನಟ ಶ್ರೀನಾಥ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಶಿವಮೊಗ್ಗ ನಗರಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಅ. 12ರಂದು ಕುವೆಂಪು ರಂಗಮಂದಿರದಲ್ಲಿ ಮಕ್ಕಳ ದಸರಾ,
ರಂಗದಸರಾ, 13ರಂದು ಮಹಿಳಾ ದಸರಾ, ಪರಿಸರ ದಸರಾ, 14ರಂದು ಬೆಳಿಗ್ಗೆ 10ರಿಂದ ಶಿವಪ್ಪನಾಯಕ ಆರಮನೆಯಲ್ಲಿ ಕಲಾದಸರಾ, ಅಂದು ಸಂಜೆ 7ಕ್ಕೆ ರಂಗಮಂದಿರದಲ್ಲಿ ರಂಗಸಂತೆ, 15ರಂದು ಫ್ರೀಡಂ ಪಾರ್ಕ್‌ನಲ್ಲಿ ರೈತ ದಸರಾ, ಯುವ ದಸರಾ, ಅಂದು ಸಂಜೆ 6 ಗಂಟೆಗೆ ಶಿವಪ್ಪನಾಯಕ ಅರಮನೆಯಲ್ಲಿಕಲಾ ದಸರಾ ಹಾಕ್ಕೋತ್ಸವ, 16ರಂದು ವೀರಶೈವ ಕಲ್ಯಾಣ ಮಂದಿರದಲ್ಲಿ
ಆಹಾರ ದಸರಾ, ಗಮಕ ದಸರಾ, 17ರಂದ ಇದೇ ಸ್ಥಳದಲ್ಲಿ ನಾಣ್ಯ ದಸರಾ-ರಾಜ ಮಹಾರಾಜರ ಕಾಲದ ಪುರಾತನ ನಾಣ್ಯಗಳ ಪ್ರದರ್ಶನ, ಅಂದು ಬೆಳಿಗ್ಗೆ 10ಕ್ಕೆ ಶಿವಪ್ಪನಾಯಕ ವೃತ್ತದಲ್ಲಿ ಇಡ್ಲಿ ಮತ್ತು ಹಣ್ಣು ತಿನ್ನುವ ಸ್ಪರ್ಧೆ, 20ರಂದು ಸಂಜೆ 5 ಗಂಟೆಗೆ ಫ್ರೀಡಂ ಪಾರ್ಕ್‌ಲ್ಲಿ ಯುವ ದಸರಾ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಇರುತ್ತದೆ.

Leave a Reply

Your email address will not be published. Required fields are marked *