ಶಿವಮೊಗ್ಗದಲ್ಲಿ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್‌ (ಬಿ.ಎಸ್.ಸಿ ) ನೂತನ ಬೃಹತ್ ಜವಳಿ ಷೋರೂಂಗೆ ಚಾಲನೆ

ಶಿವಮೊಗ್ಗದಲ್ಲಿ ಚನ್ನಬಸಪ್ಪ ಅಂಡ್ ಸನ್ಸ್‌ ಬೃಹತ್ ನೂತನ ಜವಳಿ ಷೋರೂಂಗೆ ಚಾಲನೆ
ಶಿವಮೊಗ್ಗ : ಗ್ರಾಹಕರೇ ದೇವರು ಎಂಬ ಪರಿಕಲ್ಪನೆಯಿಂದ ಕಳೆದ 88 ವರ್ಷದಿಂದ ಜನರ ಸೇವೆ ಸಲ್ಲಿಸುತ್ತಿದ್ದೇವೆ. ನಮ್ಮ ಅಜ್ಜನವರಾದ ಬಂಕಾಪುರ ಎಸ್.ನಂಜುಡಪ್ಪನವರು ಹೇಳಿದ ಕಾಯಕವೇ ಕೈಲಾಸ ಎಂಬ ವೇದವಾಕ್ಯವನ್ನೇ ನಮ್ಮ ಇಡೀ ತಲೆಮಾರಿನಿಂದ ಪಾಲಿಸುತ್ತಿದ್ದೇವೆ ಎಂದು ಸಂಸ್ಥೆಯ ನಿರ್ದೇಶಕರಾದ
ಇಂದು ಬೆಳಿಗ್ಗೆ ನಗರದ ಬಿ.ಎಚ್.ರಸ್ತೆಯ ವಿನಾಯಕ ಪಾರೇಜ್ ವಾಲ್‌ನಲ್ಲಿ ನಡೆದ ಬಿ.ಎಸ್.ಸಿ ನೂತನ ಜವಳಿ ಮಳಿಗೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಅವರು ಮೊದಲಿಗೆ ಸೀರೆ ವ್ಯಾಪಾರ ಮಾತ್ರ ನಮ್ಮ ವೃತ್ತಿಯಾಗಿತ್ತು. ಆದರೆ ಕಾಲಕ್ಕೆ ತಕ್ಕಂತೆ ಬದಲಾವಣೆ ಬಯಸಿ,
ಸಂಪೂರ್ಣ ಮದುವೆ ಜವಳಿ ದುಳಿಗೆ ಸ್ಥಾಪಿಸಬೇಕೆಂಬ ಕಲ್ಪನೆಯನ್ನು ಹಂತ ಹಂತವಾಗಿ ಪೂರ್ಣಗೊಳಿಸಿದ್ದೇವೆ. ಜೊತೆಗೆ ನಮ್ಮಗೆ ದುಷ್ಟೇ ಮುಖ್ಯವಲ್ಲ ಗ್ರಾಹಕರಿಗೆ ಸೇವೆಯೇ ನಮ್ಮ ಗುರಿಯಾಗಿದೆ. ನನ್ನ ಹಿರಿಯದ ಆಶೀರ್ವಾದ ಹಾಗೂ ಗ್ರಾಹಕರ ವಿಶ್ವಾಸವೇ ಶಿವಮೊಗ್ಗದಲ್ಲಿ ನೂತನ ಮಳಿಗೆ ಪ್ರಾರಂಭಿಸಲು ಕಾರಣ ಎಂದರು

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಶಿವಮೊಗ್ಗ ನಗರಕ್ಕೆ ಇಂತಹ ಬೃಹತ್ ಜವಳಿ ಮಳಿಗೆ ಅವಶ್ಯಕತೆಯಿತ್ತು. ಲಾಭಕ್ಕಿಂತ ಜನರಿಗೆ ಅನುಕೂಲ ಮಾಡಿಕೊಡಿ. ಜನರಿಗೆ ಒಳ್ಳೆಯ ಸೇವೆ ನೀಡಿ. ಬಿ.ಎಸ್.ಸಿ ಟೆಕ್ಸಟೈಲ್ ಸಂಸ್ಥೆಗೆ ಶುಭವಾಗಲಿ ಎಂದರು.


ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಮಾತನಾಡಿ, ಮಲೆನಾಡು ಭಾಗದ ಅತ್ಯಂತ ಪ್ರಸಿದ್ದ, ಕುವೆಂಪು ಅವರ ಕರ್ಮಭೂಮಿ ಯಲ್ಲಿ ರಾಷ್ಟ್ರಕ್ಕೆ ಮತ್ತು ನಾಡಿಗೆ ಅನೇಕ ಸಂದೇಶ ಕೊಟ್ಟ ಶಿವಮೊಗ್ಗ ನಗರಕ್ಕೆ ಬಿಎಸ್ಸಿ ಟೆಕ್ಸ್‌ ಟೈಲ್ ವಾಲ್ಆ ರಂಭಗೊಂಡಿರುವುದು ಇಲ್ಲಿನ ಜನರಿಗೆ ಸಂತಸದ ಸಂಗತಿ. ಸಾಮರಸ್ಯ, ಆತ್ಮೀಯತೆ, ಬಂಧುತ್ವಕ್ಕೆ ಮತ್ತೊಂದು ಹೆಸರೇ ಬಿ.ಎಸ್.ಸಿ ಸಂಸ್ಥೆಯಾಗಿದೆ. ಐದು ತಲೆಮಾರಿನ ವ್ಯಾಪಾರವನ್ನು ಉಳಿಸಿಕೊಂಡಿರುವ ಉಮಾಪತಿ ಅವರ ತಾಳ್ಮೆ, ಸರಳತೆ, ಪ್ರಾಮಾಣಿಕ ಹಾಗೂ ಸೇವೆಯೇ ಈ ಮಟ್ಟದ ಬೆಳವಣಿಗೆಗೆ ಕಾರಣವಾಗಿದೆ. ಜನರ ಮೆಚ್ಚುಗೆ ಗಳಿಸಿ, ಜನರ ವಿಶ್ವಾಸ, ನಂಬಿಕೆಯನ್ನು ಕಳೆದ 48 ವರ್ಷಗಳಿಂದ ಉಳಿಸಿಕೊಂಡು ಬಂದಿರುವ ಬಿ.ಎಸ್.ಸಿ ಸಂಸ್ಥೆಯ ಇನ್ನೂ ಹತ್ತು ನೂತನ ಮಳಿಗೆಗಳನ್ನು ಪ್ರಾರಂಭಿಸಲಿ ಎಂದರು.


ಬಳಿಕ ಬಿ.ಎಸ್.ಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಯು. ಚಂದ್ರಶೇಖರ ಅವರು ಮಾತನಾಡಿ, 38 ವರ್ಷಗಳ ಗ್ರಾಹಕರ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಳ್ಳುವ ಜನಾಬ್ದಾರಿಯಿಂದ ಶಿವಮೊಗ್ಗದಲ್ಲಿ ನೂತನ ಜವಳಿ ಮಳಿಗೆ ಆರಂಭಿ ಸಿದ್ದೇವೆ. ಹಿರಿಯರ ಆಶೀರ್ವಾದ ಹಾಗೂ ಗ್ರಾಹಕರ ಅಪೇಕ್ಷೆ ಮೇರೆಗೆ ಶಿವಮೊಗ್ಗದಲ್ಲಿ ರಾಜ್ಯದಲ್ಲಿ ದೊಡ್ಡದಾದ ಜವಳಿ ಮಳಿಗೆ ಪ್ರಾರಂಭಿಸಿದ್ದೇವೆ. ದಾವಣಗೆರೆ ಹಾಗೂ ಬೆಳಗಾವಿಯಲ್ಲಿ ನೀಡಿದ ಸಹಕಾರ, ಪ್ರೋತ್ಸಾಹವನ್ನೇ ಗ್ರಾಹಕರು ಶಿವಮೊಗ್ಗ ಮಳಿಗೆಗೂ ನೀಡಬೇಕು ಎಂದರು.


ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಮಾತನಾಡಿ, ಜವಳಿ ಉದ್ಯಮವೆಂದರೆ ಬಿಎಸ್ ಸಿ, ಬಿಎಸ್ ಸಿಎಂದರೆ ಜವಳಿ ಎಂಬಂತೆ ಪ್ರಸಿದ್ಧಿ ಪಡೆದಿದೆ. ಬಿ.ಎಸ್.ಸಿ ಸಂಸ್ಥೆಯು ಕೇವಲ ಜವಳಿ ವ್ಯಾಪಾರವಷ್ಟೇ ಮಾಡದೇ ಉತ್ಪಾದನೆಯ ಕೇಂದ್ರಗಳನ್ನು ಸ್ಥಾಪಿಸುವಂತೆ ನಾನು ಸಲಹೆ ನೀಡಿದ್ದೇನೆ. ಕರ್ನಾಟಕ ಅಷ್ಟೇ ಅಲ್ಲದೇ ರಾಜ್ಯದಲ್ಲಿ ಅತಿ ದೊಡ್ಡ ಜವಳಿ ಶೋರೂಮ್ ಎಂಬುವುದಕ್ಕೆ ಶಿವಮೊಗ್ಗ ನಗರದ ಕೊರೂಮ್ ಸಾಕ್ಷಿಯಾಗಿದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕರಾದ ಎಸ್.ಎಸ್. ಚನ್ನಬಸಪ್ಪ, ಡಿ.ಎಸ್. ಆರುಣ್, ಡಾ. ಧನಂಜಯ ಸರ್ಜಿ ಮತ್ತಿತರರು ಉಪಸ್ಥಿತರಿದ್ದು ಶುಭಕೋರಿದರು.

Leave a Reply

Your email address will not be published. Required fields are marked *