ಬೆಳೆ ನಷ್ಟದ ರೈತರಿಗೆ ಎಕರೆಗೆ
30 ಸಾವಿರ ಪರಿಹಾರ ನೀಡಿ
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷನಿಖಿಲ್ ಕುಮಾರಸ್ವಾಮಿ ಆಗ್ರಹ
ಹೊಲಕ್ಕೆ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ
ಶಿವಮೊಗ್ಗ: ಮಳೆಯ ಕೊರತೆ ಹಾಗೂ ಮುಂಗಾರು ಕೈಕೊಟ್ಟ ಕಾರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಕೂಡಲೇ ಎಕರೆಗೆ ಕನಿಷ್ಠ 25 ರಿಂದ 30 ಸಾವಿರ ರೂಪಾಯಿ ಪರಿಹಾರ ಘೋಷಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಭೇಟಿ ನೀಡಿ ಒಣಗುತ್ತಿರುವ ಮೆಕ್ಕೆಜೋಳದ ಬೆಳೆ ಹಾಗೂ ರೈತರ ಕೃಷಿ ಸಮಸ್ಯೆಗಳನ್ನು ನೇರವಾಗಿ ವೀಕ್ಷಿಸಿದ こち ಅವರು ಮಾತನಾಡಿದರು. ರಾಜ್ಯದಲ್ಲಿ ಮಳೆಯ ಅಭಾವದಿಂದ ಬಿತ್ತನೆ ಮಾಡಿದ ಪ್ರದೇಶಗಳಲ್ಲೂ ಬೆಳೆ ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದ್ದು, ಅನ್ನದಾತರು ಕಣ್ಣೀರು ಹಾಕುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಬೆಳೆ ನಷ್ಟದ ರೈತರಿಗೆ ಎಕರೆಗೆ 30 ಸಾವಿರ ಪರಿಹಾರ ನೀಡಿ..
ಶಿವಮೊಗ್ಗ ತಾಲ್ಲೂಕಿನ ತ್ಯಾಜವಳ್ಳಿ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೇವಲ 220 ತಾಲೂ ಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿ ಕೈತೊಳೆದು ಕೊಂಡಿದೆ. ಆದರೆ ಮಳೆ ಕೊರತ “ಯಿಂದ ಇಡೀ ಕೃಷಿ ವಲಯವೇ ಸಂಕ ಷ್ಟದಲ್ಲಿದ್ದು, ಸಂಪೂರ್ಣ ಕರ್ನಾಟಕ ವನ್ನು ಬರಪೀಡಿತ ಪ್ರದೇಶ ಎಂದು
ಘೋಷಿಸಬೇಕು ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ ಸ್ವಾಮಿ ಆಗ್ರಹಿಸಿದ್ದಾರೆ. ಶಿವಮೊಗ್ಗ ತಾಲೂಕಿನ ತ್ಯಾಜವಳ್ಳಿ ಗ್ರಾಮದಲ್ಲಿ ಅವರು ಮಾತನಾಡಿದರು.
ರೈತರ ಆತ್ಮಹತ್ಯೆ: ಕಳೆದ ಮೂರೂ ವರೆ ವರ್ಷಗಳಲ್ಲಿ ರಾಜ್ಯದಲ್ಲಿ 3,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ಕಾರದ ರೈತ ವಿರೋಧಿ ನೀತಿಯೇ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಂಟಿ ಸಮೀಕ್ಷೆ ಮತ್ತು ಪರಿಹಾರ: ಪಾರದರ್ಶಕವಾಗಿ ಬೆಳೆ ನಷ್ಟದ ಜಂಟಿ ಸಮೀಕ್ಷೆ ನಡೆಸಿ, ಅರ್ಹ ರೈತರಿ ಗೆ ತಕ್ಷಣವೇ ‘ಫಸಲ್ ಬಿಮಾ’ ಯೋ ಜನೆ ಮೂಲಕ ವಿಮಾ ಪರಿಹಾರ ಒದಗಿಸಬೇಕು. ಶಿವಮೊಗ್ಗ ಜಿಲ್ಲೆ ಯಲ್ಲಿ ಮೆಕ್ಕೆಜೋಳ ಸೇರಿದಂತೆ ಇತರ ಬೆಳೆಗಳಿಗೆ ತಗುಲಿರುವ ‘ಎಲೆಚುಕ್ಕೆ ರೋಗ’ ತಡೆಗಟ್ಟಲು ರೈತರಿಗೆ ತಾಂತ್ರಿ ಕ ಮತ್ತು ಆರ್ಥಿಕ ನೆರವು ನೀಡಬೇಕು.
ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಅವರು ಆಯನೂರಿನ ಹೊಲಕ್ಕೆ ಭೇಟಿ ನೀಡಿ ಒಣಗಿದ ಮೆಕ್ಕೆ ಜೋಳ ಪರಿಶೀಲಿಸಿದರು. ಮಳೆ ಕೊರತೆಯಿಂದಾಗಿ ಬೆಳೆ ಒಣಗಿರುವುದನ್ನು ಪರಿಶೀಲಿಸಿ ಪರಿಶೀಲಿಸಿ: ತೆರಳಿದರು. ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ, ವಿಧಾನ ಪರಿಷತ್ ಸದಸ್ಯ ಭೋಜಾನಾಯ್ಕ, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ರಾಮಕೃಷ್ಣ, ನಗರ ಯುವ ಜೆಡಿಎಸ್ ಅಧ್ಯಕ್ಷ ಸಂಜಯ್ ಎಸ್ ಕಶ್ಯಪ್,ನರಸಿಹ ಗಂಧದಮನೆ, ದೀಪಕ್ ಸಿಂಗ್, ಭವಾನಿ
ನರಸಿಹ, ಯುವ ಜನತಾದಳ ಅಧ್ಯಕ್ಷ ಮಧು ಕುಮಾರ್, ಪ್ರಮುಖರಾದ ಕಾಂತರಾಜ್ ಸೇರಿ ಹಲವರು ಇದ್ದರು.




