ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭಾವಿಗಳಿಗೆ “ಉಚಿತ ವೆಂಡರ್ ಡೆವೆಲೋಪ್‌ಮೆಂಟ್ ಕಾರ್ಯಗಾರ”

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭಾವಿಗಳಿಗೆ “ಉಚಿತ ವೆಂಡರ್ ಡೆವೆಲೋಪ್‌ಮೆಂಟ್ ಕಾರ್ಯಗಾರ”

ನ್ಯಾಷನಲ್ ಎಸ್‌ಸಿ/ಎಸ್‌ಟಿ ಹಬ್, ಭಾರತ ಸರ್ಕಾರ, ಅರೈಸ್ ಸಂಸ್ಥೆ ಹಾಗೂ ಜಿಲ್ಲಾ ಕೈಗಾರಿಕ ಕೇಂದ್ರ ಇವರ ಸಹಯೋಗದೊಂದಿಗೆ ಎಸ್‌ಸಿ/ಎಸ್‌ಟಿ ಉದ್ಯಮಿಗಳಿಗೆ ದಿನಾಂಕ: 27.10.2026 (ಮಂಗಳವಾರ) ರಂದು ವೆಂಡರ್ ಡೆವೆಲೋಪ್‌ಮೆಂಟ್ ಕಾರ್ಯಗಾರವನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, (ಗಾಂಧಿ ಪಾರ್ಕ್ ಹತ್ತಿರ) ಕೆ.ಟಿ.ಶಾಮಯ್ಯ ರಸ್ತೆ, ಶಿವಮೊಗ್ಗ ಇಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಗಾರದಲ್ಲಿ ಎಸ್‌ಸಿ/ಎಸ್‌ಟಿ ಸಮೂದಾಯದ ಉದ್ಯಮಿಗಳು, ಯುವಕರು, ಮಹಿಳಾ ಪಲಾನುಭಾವಿಗಳು ಮತ್ತು ಹೊಸ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಗಾರದ್ದಲ್ಲಿ ಉದ್ಯಮ ಆರಂಭಿಸುವ ವಿಧಾನ, ಸರ್ಕಾರದ ವಿವಿಧ ಯೋಜನೆಗಳು, ವೆಂಡರ್ ಡೆವೆಲೋಪ್‌ಮೆಂಟ್‌ನ ಅವಕಾಶಗಳು, ಸರ್ಕಾರಿ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆ ಎಮ್.ಎಸ್.ಎಮ್.ಇ ಉದ್ಯಮ್ ರಿಜಿಸ್ಟೆçÃಷನ್, ಹಣಕಾಸಿನ ನೆರವು, ಮಾರುಕಟ್ಟೆ ಸಂಪರ್ಕಗಳ ಕುರಿತು ವಿವಿಧ ತಜ್ಞರಿಂದ ಮಾಹಿತಿ ನೀಡಲಾಗುವುದು.

ಈ ಕಾರ್ಯಗಾರದಲ್ಲಿ ಭಾಗವಹಿಸಲು ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಆಸಕ್ತ ಉದ್ಯಮಿಗಳು, ಯುವಕರು, ಮಹಿಳೆಯರು, ಹಾಗೂ ಸಾರ್ವಜನಿಕರು ಭಾಗವಹಿಸಿ ಈ ಕಾರ್ಯಗಾರದ ಪ್ರಯೋಜನ ಪಡೆಯುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ಹಾಗು ನೋಂದಾಣಿಗಾಗಿ ಸಂಪರ್ಕಿಸಿ:
ಶ್ರೀ. ಸದಾಶಿವ ಎಸ್ – ಮುಖ್ಯ ತರಬೇತಿ ಸಂಯೋಜನಾಧಿಕಾರಿ, ಅರೈಸ್ ಸಂಸ್ಥೆ – ಮೊಬೈಲ್ ಸಂಖ್ಯೆ: 9880041360

Leave a Reply

Your email address will not be published. Required fields are marked *