ಎಲ್ಲೆಡೆ ಸಂಭ್ರಮದ ಬಸವೇಶ್ವರ ಜಯಂತಿ ..
ಶಿವಮೊಗ್ಗ ಮೀಡಿಯಾ : : ಸಂಭ್ರಮ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಗರಿಗೆದರಿತ್ತು, ವೀರಶೈವ-ಲಿಂಗಾಯತ ಸಮಾಜ ಮಾತ್ರವಲ್ಲದೇ, ಬೇರೆ ಬೇರೆ ಸಂಘ ಸಂಸ್ಥೆಗಳು ಬಸವ ಜಯಂತಿ ಆಚರಣೆ ಮಾಡಿ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನ ಸ್ಮರಿಸಿದರು.
ಬೆಳಿಗ್ಗೆ ಶಿವಮೊಗ್ಗದಕೇಂದ್ರದಲ್ಲಿ ಬಸವ ಜಯಂತಿ ಆಚರಣೆ ಭಾಗವಾಗಿ ವೆಂಕಟೇಶ ನಗರದ ಪ್ರಮುಖ ರಸ್ತೆಗಳಲ್ಲಿ ಬಸವೇಶ್ವರರ ಭಾವಚಿತ್ರ ಪುತ್ಥಳಿಯ ಪಲ್ಲಕ್ಕಿ ಉತ್ಸವ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡವು. ಭಜನಾ ತಂಡದ ಸದಸ್ಯರು ವಚನಗಳನ್ನು ಹಾಡಿದರು. ವಿನೋಬ ನಗರದ ಶಿವಾಲಯ, ಗಾಂಧೀ ಬಜಾರಿನ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿತು.
ಬಸವಣ್ಣನ ತತ್ವ ಅಳವಡಿಸಿಕೊಳ್ಳೋಣ: ಸಂಸದ ಬಿ.ವೈ. ರಾಘವೇಂದ್ರ
ಸಂಜೆ ಜಿಲ್ಲಾಡಳಿತ ಹಾಗೂ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ಕುವೆಂಪು ರಂಗ ಮಂದಿರದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಕಾಯಕ ದಾಸೋಹ ಮತ್ತು ಸಾಮಾಜಿಕ ನ್ಯಾಯದ ತತ್ವಗಳ ಸಾರಿದ ಬಸವಣ್ಣನವರ ಒಂದಾದರೂ ವಚನ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಇಂದಿನ ಸಾಮಾಜಿಕ ವಿಪ್ಲವಗಳಿಗೆ ಪರಿಹಾರ ಸಿಗಲಿದೆ ಎಂದು ಆಶಿಸಿದರು.
ಸಾರ್ವತ್ರಿಕವಾಗಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ ವಿಶ್ವದ ಮೊದಲ ಸಂಸತ್ತು ಎಂದರೆ ಅದು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಎಂದು ಹೇಳಿದರು.
ಯುವಜನತೆ ಇಂದು ಮೊಬೈಲ್ ಫೋನ್ ಗೀಳಿಗೆ ತುತ್ತಾ-ಗುತ್ತಿದ್ದು, ಅವರಲ್ಲಿ ಮಾನಸಿಕ ಖಿನ್ನತೆ
ಶಿವಮೊಗ್ಗದಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ಬಸವೇಶ್ವರ ವೀರಶೈವ-ಲಿಂಗಾಯತ ಸೇವಾ ಸಂಘದಿಂದ ನಡೆದ ಬಸವ ಜಯಂತಿ ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು
ಶಿವಮೊಗ್ಗದ ಗಾಂಧಿಬಜಾರ್‌ನ ಬಸವೇಶ್ವರ ದೇವಸ್ಥಾನದಿಂದ ಸೋಮವಾರ ಸಂಜೆ ಕುವೆಂಪು ರಂಗಮಂದಿರದತ್ತ ಹೊರಟ ಬಸವ ಜಯಂತಿ ಮೆರವಣಿಗೆಯ ನೋಟ
ಹೆಚ್ಚಿದೆ. ಮಕ್ಕಳಿಗೆ ವಚನಗಳ ಆಶಯ ತಿಳಿಸುವ ಪ್ರಯತ್ನ ಮಾಡಿದಲ್ಲಿ ವೈದ್ಯರ ಅವಶ್ಯಕತೆ ಇರುವುದಿಲ್ಲ ಎಂದರು.
ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ, ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಭದ್ರಾವತಿಯ ಡಾ.ಸಂತೋಷ್ ಕುಮಾರ್ ವಿಶೇಷ ಉಪನ್ಯಾಸ ಎಸ್.ಎನ್. ಅರುಣ್, ರಾಜ್ಯ ಜವಳಿ ನಿಗಮದ ಅಧ್ಯಕ್ಷ ಕೆ.ಚೇತನ್, ಸೂಡಾ ಅಧ್ಯಕ್ಷ ಎಚ್. ಎಸ್. ಸುಂದರೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ . ಶಾಸಕರಾದ ಚನ್ನಬಸಪ್ಪ, ಡಿ .ಎಸ್. ಅರುಣ್ ಸೇರಿದಂತೆ ಮತ್ತಿತರರು ಉಪಸ್ಥಿರಿದ್ದರು ..
ಗಮನ ಸೆಳೆದ ಮೆರವಣಿಗೆ..
ಬಸವ ಜಯಂತಿ ಅಂಗವಾಗಿ ಸಂಜೆ ಬಸವೇಶ್ವರ ದೇವಸ್ಥಾನದಿಂದ ಬಸವ-ಣ್ಣನವರ ಭಾವಚಿತ್ರದ ರಾಜಬೀದಿ ಉತ್ಸವ ನಡೆಯಿತು. ಮೆರವಣಿಗೆಯು ಗಾಂಧಿಬಜಾರ್, ನೆಹರೂ ರಸ್ತೆ, ಗೋಪಿ ವೃತ್ತ ಹಾಗೂ ಮಹಾವೀರ ವೃತ್ತದ ಮೂಲಕ ಸಾಗಿ ಬಸವೇಶ್ವರ ವೃತ್ತ ತಲುಪಿತು. ಅಲ್ಲಿ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು. ಮೆರವಣಿಗೆ ಕುವೆಂಪು ರಂಗಮಂದಿರದಲ್ಲಿ ಅಂತ್ಯಗೊಂಡಿತು. 20ಕ್ಕೂ ಹೆಚ್ಚು ಅಲಂಕೃತ ಎತ್ತಿನ ಬಂಡಿಗಳು ಹಾಗೂ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದವು., ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಗೌರವ ಕಾರ್ಯದರ್ಶಿ ಎಸ್.ಪಿ.ದಿನೇಶ್,ಸಹ ಕಾರ್ಯದರ್ಶಿ ಬಳ್ಳಕೆರೆ ಸಂತೋಷ್,ಉಪಾಧ್ಯಕ್ಷರಾದ ಶಾಂತ ಆನಂದ್ , ಕೋಶಾಧ್ಯಕ್ಷರಾದ ಕೆ.ಎಸ್ . ತಾರಾನಾಥ
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಎಸ್ಪಿ ಬಿ.ನಿಖಿಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಉಮೇಶ್ , ಜಿ. ವಿಜಯ್ ಕುಮಾರ್, ಕೆ.ಆರ್ .ಸೋಮನಾಥ್ ಹಾಜರಿದ್ದರು.


