ಬಸವ ಜಯಂತಿ ಅಂಗವಾಗಿ ಬಸವ ಕೇಂದ್ರದಲ್ಲಿ ರಕ್ತದಾನ ಶಿಬಿರ. ಬಸವ ಕೇಂದ್ರದ ಶ್ರೀಗಳಿಂದ ರಕ್ತದಾನಕ್ಕೆ ಚಾಲನೆ.
ಎಲ್ಲಾ ದಾನಗಳಿಗಿಂತ ಪವಿತ್ರವಾದದ್ದು ರಕ್ತದಾನ, ರಕ್ತದಾನ ಮಾಡುವುದರಿಂದ ನಮ್ಮ ದೇಹ, ಮನಸ್ಸು ಹಾಗೂ ಆರೋಗ್ಯ ಸದೃಢವಾಗಿರುತ್ತದೆ ಎಂದು ಪೂಜ್ಯ ಶ್ರೀ ಮ. ನಿ. ಪ್ರ. ಡಾ.ಬಸವ ಮರುಳಸಿದ್ದ ಸ್ವಾಮಿಗಳು ನುಡಿದರು. ಅವರು ಇಂದು ಬೆಳಿಗ್ಗೆ ಬಸವ ಕೇಂದ್ರದಲ್ಲಿ ಬಸವ ಜಯಂತಿ ಅಂಗವಾಗಿ ಬಸವ ಕೇಂದ್ರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಕ್ಕನ ಬಳಗ, ಕದಳಿ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು,
26ನೇ ಬಾರಿ ರಕ್ತದಾನ ಮಾಡುವುದರ ಮುಖಾಂತರ ಶಿಬಿರಕ್ಕೆ ಚಾಲನೆ ನೀಡಿದರು. ನಿರಂತರವಾಗಿ ರಕ್ತದಾನ ಮಾಡುವುದರಿಂದ ಒಳ್ಳೆಯ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಹಾಗೂ ರಕ್ತದಾನದಿಂದ ಸಾಕಷ್ಟು ಜನರ ಪ್ರಾಣವನ್ನು ಉಳಿಸಿರುವ ಪುಣ್ಯ ನಮಗೆ ಲಭಿಸುತ್ತದೆ ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡುವುದರ ಮುಖಾಂತರ ಸದೃಢವಾದ ಸಮಾಜವನ್ನು ನಿರ್ಮಾಣ ಮಾಡೋಣ ಎಂದು ಕರೆ ನೀಡಿದರು ಇದೇ ಸಂದರ್ಭದಲ್ಲಿ ಶಿವಮೊಗ್ಗ ಬಸವೇಶ್ವರ ವೀರಶೈವ ಲಿಂಗಾಯಿತ ಸೇವಾ ಸಂಘದ ಅಧ್ಯಕ್ಷರಾದ ಎಸ್ ಎಸ್ ಜ್ಯೋತಿಪ್ರಕಾಶ್. ಬಳ್ಳಕೆರೆ ಸಂತೋಷ್. ಎಸ್ ಪಿ ದಿನೇಶ್. ಎಚ್ ಸಿ ಯೋಗೇಶ್. ರಾಜ್ಯಾಧ್ಯಕ್ಷರಾದ ಷಡಕ್ಷರಿ.. ಡಾ. ಧನಂಜಯ ಸರ್ಜಿ. ಜಿ ವಿಜಯಕುಮಾರ್.
ಮಹಾಸಭಾ ಅಧ್ಯಕ್ಷರು ರುದ್ರಮುನಿ ಸಜ್ಜನ್. ರಾಜಶೇಖರ್. ಮಲ್ಲಿಕಾರ್ಜುನ್ ಕಾನೂರ್. ಕೆ ಆರ್ ಸೋಮನಾಥ್. . ಬಸವ ಕೇಂದ್ರದ ಅಧ್ಯಕ್ಷರಾದ ಜಿ ಬೆನಕಪ್ಪ. ಚಂದ್ರಶೇಖರ್ ಹಾಲಸ್ವಾಮಿ. ಸಂತೋಷ್ ಕಾಚಿನಕಟ್ಟೆ,ಎಸ್ ಪಿ ದಿನೇಶ್ ಧರಣೇಂದ್ರ ದಿನಕರ್. ಹಾಗೂ ಶಂಕರ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಗೂ ಬಸವ ಕೇಂದ್ರದ ಭಕ್ತರು ಉಪಸ್ಥಿತರಿದ್ದರು.

