ಡಿ. ಕೆ . ಶಿವಕುಮಾರ್ ರವರು ಮುಖ್ಯ ಮಂತ್ರಿಗಳಾಗಿ ಅಧಿಕಾರ ಸ್ವೀಕಾರದ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ನೇರ ಪ್ರಸಾರವನ್ನು LED ವಾಲ್ ಮೂಲಕ ವೀಕ್ಷಣೆಗೆ ಅನುಕೂಲ, ಹೋಳಿಗೆ ಊಟ
ಶಿವಮೊಗ್ಗ : ನಗರದ ಉತ್ತರ ಬ್ಲಾಕ್ ಕಾಂಗ್ರೆಸ್ ಮತ್ತು ದಕ್ಷಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಡಿ. ಕೆ . ಶಿವಕುಮಾರ್ ರವರು ಮುಖ್ಯ ಮಂತ್ರಿಗಳಾಗಿ ಅಧಿಕಾರ ಸ್ವೀಕಾರದ ಹಿನ್ನಲೆಯಲ್ಲಿ ನಗರದ ಶಿವಪ್ಪ ನಾಯಕ ವೃತ್ತ ದಲ್ಲಿ ಸಾರ್ವಜನಿಕರಿಗೆ ಪ್ರಮಾಣವಚನ ಸ್ವೀಕಾರದ ಕಾರ್ಯಕ್ರಮದ ನೇರ ಪ್ರಸಾರವನ್ನು LED ವಾಲ್ ಮೂಲಕ ವೀಕ್ಷಣೆಗೆ ಅನುಕೂಲ ಮಾಡಿಕೊಡಲಾಗಿತ್ತು .
ಅಲ್ಲದೆ ಸಾರ್ವಜನಿಕರಿಗೆ ಹೋಳಿಗೆ ಊಟ ನೀಡುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು . ಕಾರ್ಯಕ್ರಮದಲ್ಲಿ ಶಿವಮೊಗ್ಗ ವಿಧಾನ ಸಭಾ ಕ್ಷೇತದ ನಿಕಟಪೂರ್ವ ಕಾಂಗ್ರೆಸ್ ಅಭ್ಯರ್ಥಿ ಎಚ್ .ಸಿ. ಯೋಗೀಶ್ , ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಕುಮಾರ್, ಕೆ ಪಿ ಸಿ ಸಿ ಕಾರ್ಯದರ್ಶಿ ಕೆ. ದೇವೇಂದ್ರಪ್ಪ , ಎಸ್.ಟಿ . ಹಾಲಪ್ಪ , ಚಿನ್ನಪ್ಪ್ಪ ನಾಗರಾಜ್ ಕಂಕಾರಿ , ಶಮೀರ್ ಖಾನ್ , ಸ್ಟೆಲ್ಲಾ ಮಾರ್ಟಿನ್ ರಂಗೇಗೌಡ , ಡಾ . ದಿನೇಶ್ , ಮಸ್ಕನ್ , ತಂಗರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು..


