ವಿಶ್ವ ಪರಿಸರ ದಿನಾಚರಣೆಯಂದು ಈಶ್ವರವನದಲ್ಲಿ ಮಿಯಾವಾಕಿ ಅರಣ್ಯಕ್ಕೆ ಚಾಲನೆ

ವಿಶ್ವ ಪರಿಸರ ದಿನಾಚರಣೆಯಂದು ಈಶ್ವರವನದಲ್ಲಿ ಮಿಯಾವಾಕಿ ಅರಣ್ಯಕ್ಕೆ ಚಾಲನೆ

ಶಿವಮೊಗ್ಗ: ನವ್ಯಶ್ರೀ ಈಶ್ವರವನ ಚಾರಿಟೆಬಲ್ ಟ್ರಸ್ಟ್(ರಿ) ನಿಂದ ಜನ್ಮತಳೆದ ಈಶ್ವರವನವು ಇದೇ 2026ರ ಜೂನ್ 05 ರಂದು ಹತ್ತು ವರ್ಷಗಳನ್ನು ಪೂರೈಸಲಿದೆ. ಈ ನಿಮಿತ್ತ ಈ ಬಾರಿಯ ವಿಶ್ವಪರಿಸರ ದಿನದಂದು ಈಶ್ವರವನದ ಪರಿಸರದಲ್ಲಿ ಮಿಯಾವಾಕಿ ಅರಣ್ಯ ಬೆಳಸುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಗುರುವಾರ ಪತ್ರಿಕಾಗೋಷ್ಢಿಯಲ್ಲಿ ಈ ಬಗ್ಗೆ ಮಾತನಾಡಿದ ನವ್ಯಶ್ಶೀ ನಾಗೇಶ್,
ಈಶ್ವರವನದಲ್ಲಿ ಜೂನ್ 5 ರ ಬೆಳಗ್ಗೆ 10 ಗಂಟೆಗೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ನಗರದ ವಿವಿಧ ಶಾಲೆಯ ಸುಮಾರು 400ರಷ್ಟು ಮಕ್ಕಳು ಇದರಲ್ಲಿ ಪಾಲ್ಗೊಳ್ಳುವರು ಎಂದರು.
ಇಲ್ಲಿ ಎರಡು ಎಕರೆ ಪ್ರತ್ಯೇಕ ಸ್ಥಳಗಳಲ್ಲಿ 120 ಜಾತಿಯ ಒಂದು ಸಾವಿರಕ್ಕೂ ಅಧಿಕ ಅಳಿವಿನಂಚಿನ ಮರಗಳೊಂದಿಗೆ ಇಂದು ದಟ್ಟವಾಗಿ ಅರಣ್ಯ ಬೆಳೆದು ನಿಂತಿದೆ. ಕಳೆದ ಹತ್ತು ವರ್ಷಗಳಲ್ಲಿ ಈ ಮರಗಳು ಮುಗಿಲೆತ್ತರಕ್ಕೆ ಬೆಳೆದು ಪರಿಸರ ಪ್ರೀಯರನ್ನು ಕೈಬೀಸಿ ಕರೆಯುತ್ತಿವೆ.
ಇತ್ತೀಚೆಗೆ ರಾಜ್ಯ ಸರ್ಕಾರವೂ ಸಹ ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸುಮಾರು 100 ಕಡೆಗಳಲ್ಲಿ ಈ ಮಿಯಾವಾಕಿ ಅರಣ್ಯ ಬೆಳೆಸುವ ಯೋಜನೆಯನ್ನು ಘೋಷಿಸಿದೆ. ಸರ್ಕಾರದ ಈ ಮಹತ್ವಾಕಾಂಕ್ಷೆಯ ಘೋಷಣೆಯ ಬೆನ್ನಲ್ಲೇ ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ ಸಂಸ್ಥೆಯು ತನ್ನ ಸ್ವಂತ ಜಾಗದಲ್ಲಿ ಈ ಮಿಯಾವಾಕಿ ಅರಣ್ಯ, ಬೆಳೆಸಲು ನಾಂದಿ ಹಾಡುತ್ತಿರುವುದು ವಿಶೇಷವೆನಿಸಿದೆ ಎಂದರು.
ಮಿಯಾವಾಕಿ ಅರಣ್ಯ ಎಂಬ ಕಲ್ಪನೆಯು ಡಾ.ಅಕಿರಾ ಮಿಯಾವಾಕಿ ಎಂಬ ಜಪಾನೀ ಸಸ್ಯಶಾಸ್ತ್ರಜ್ಞನ ಆವಿಷ್ಕಾರವಾಗಿದ್ದು ಸ್ಥಳೀಯ ಜಾತಿಗಳ ಸಸ್ಯಗಳನ್ನು ಅತಿ ಕಡಿಮೆ ಜಾಗದಲ್ಲಿ ಕಡಿಮೆ ಅಂತರದಲ್ಲಿ ಬಳಸುವ ಮೈಕ್ರೋ ಅರಣ್ಯವು ಸಾಮಾನ್ಯಕ್ಕಿಂತ ಹತ್ತು ಪಟ್ಟು ವೇಗವಾಗಿ, ಮೂವತ್ತು ಪಟ್ಟು ದಟ್ಟವಾಗಿ ಹಾಗೂ ಪ್ಲಾಂಟೇಶನ್ ಸಾಂಪ್ರದಾಯಿಕ ಜೀವವೈವಿದ್ಯತೆಯನ್ನು ನೀಡಬಲ್ಲವುಗಳಾಗಿವೆ. ಗಳಿಗಿಂತ ನೂರು ಪಟ್ಟು ಹೆಚ್ಚು ಜೀವವೈವಿಧ್ಯತೆ ನೀಡಬಲ್ಲದು ಎಂದರು.
ಈಶ್ವರವನದಲ್ಲಿ ಪ್ಲಾಸ್ಟಿಕ್ ಮುಕ್ತ ಆಚರಣೆಗಳನ್ನು ಪಸರಿಸುವತ್ತ ಆದ್ಯತೆ ನೀಡುತ್ತಿದೆ. ಪುತಿ ವರ್ಷ ನಗರದ ಶಾಲಾ ಮಕ್ಕಳನ್ನು ಈಶ್ವರವನಕ್ಕೆ ಆಹ್ವಾನಿಸಿ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಭವಿಷ್ಯದ ಜೀವನಕ್ಕೆ ಪುಕೃತಿ ಸಂರಕ್ಷಣೆಯ ಮಹತ್ವ, ಪಶ್ಚಿಮಘಟ್ಟಗಳ ವಿಶೇಷತೆ, ನೀರಿನ ಮಿತ ಬಳಕೆ, ಗಿಡಮರಗಳ ಬಗ್ಗೆ ಮಾಹಿತಿ, ಪುಕೃತಿಗೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯ ಸ್ವಯಂ ನಿಷೇಧ ಕುರಿತು ಜಾಗೃತಿ, ಪರಿಸರ ನಾಶಕ್ಕೆ ಕಾರಣವಾಗಿರುವ ವೈಭೋಗದ ಜೀವನ ಕ್ರಮಗಳ ಬಗ್ಗೆ ಕಡಿವಾಣ ಹಾಕುವ ಬಗ್ಗೆ ಮಾಹಿತಿ, ಸರಳ ಜೀವನಕ್ಕೆ ಪ್ರೇರೇಪಿಸುವುದು, ಊಟದಲ್ಲಿ ಆಹಾರ ಪದಾರ್ಥಗಳು ವ್ಯರ್ಥವಾಗದಂತೆ ಮನವರಿಕೆ ಮಾಡುವುದು ಅಲ್ಲದೆ ಮೇಲ್ಕಂಡ ವಿಷಯಗಳ ಬಗ್ಗೆ, ಮಕ್ಕಳಿಗೆ ಪ್ರಮಾಣವಚನ ಬೋಧನೆ ಇತ್ಯಾದಿ ಪರಿಸರ ಪ್ರಜ್ಞೆ ಮೂಡಿಸಿ ಭವಿಷ್ಯದ ಪ್ರಜೆಗಳಲ್ಲಿ ಪರಿಸರದ ಮಹತ್ವ ಸಾರುವ ಅಮೂಲ್ಯ ಕಾರ್ಯಕ್ಕೆ ಈಶ್ವರವನವು ಶ್ರಮಿಸುತ್ತಿದೆ ಎಂದರು.

Leave a Reply

Your email address will not be published. Required fields are marked *