ಟಿ.ಎಸ್. ಸಿದ್ದೇಶ್ ಅವರ  ಜನ್ಮದಿನ ಬೃಹತ್ ರಕ್ತದಾನ ಶಿಬಿರ,  40ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹ, ಶುಭಾಶಯ ಕೋರಿದ ಸಂಸದ ಬಿ.ವೈ.ರಾಘವೇಂದ್ರ, ಎಂಎಲ್‌ಸಿ ಡಾ.ಧನಂಜಯ ಸರ್ಜಿ. ಕೆ.ಎಸ್. ಈಶ್ವರಪ್ಪ, ಕೆ. ಈ. ಕಾಂತೇಶ್.

ಟಿ.ಎಸ್. ಸಿದ್ದೇಶ್ ಅವರ  ಜನ್ಮದಿನ ಬೃಹತ್ ರಕ್ತದಾನ ಶಿಬಿರ,  40ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹ..

ಶುಭಾಶಯ ಕೋರಿದ ಸಂಸದ ಬಿ.ವೈ.ರಾಘವೇಂದ್ರ, ಎಂಎಲ್‌ಸಿ ಡಾ.ಧನಂಜಯ ಸರ್ಜಿ, ಕೆ. ಎಸ್. ಈಶ್ವರಪ್ಪ, ಕೆ. ಈ. ಕಾಂತೇಶ್..

ಶಿವಮೊಗ್ಗ: ನಗರದ ಗೋಪಾಳದ ಸಾಯಿ ಟ್ರಸ್ಟ್ ಹಾಗೂ ಸನ್ ರೈಸ್ ಫೆಸಿಲಿಟಿ ಸರ್ವಿಸಸ್ ಸಿಇಒ ಟಿ.ಎಸ್. ಸಿದ್ದೇಶ್ ಅವರ ಜನ್ಮದಿ ನದ ಅಂಗವಾಗಿ ರೋಟರಿ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಸಂಸದರಾದ ಬಿ.ವೈ. ರಾಘವೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂ ಜಯ ಸರ್ಜಿ, ಕೆ. ಎಸ್. ಈಶ್ವರಪ್ಪ, ಕೆ. ಈ. ಕಾಂತೇಶ್. ಅವರು ಜನ್ಮದಿನದ ಶುಭಾಶಯ ತಿಳಿಸಿ, ಮಾನವೀಯ ಸೇವೆಯ ಭಾಗವಾಗಿ ರಕ್ತದಾನ ಶಿಬಿರ ಹಮ್ಮಿಕೊ೦ಡಿರುವುದನು
ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ರಕ್ತನಿಧಿ ಕೇಂದ್ರದ ಪ್ರಮುಖರಾದ ಆನಂದ್, ವೈದ್ಯಕೀಯ ಸಿಬ್ಬಂದಿ ಹಾಗೂ ತಾಂತ್ರಿಕ ವರ್ಗದವರು ಉಪಸ್ಥಿತರಿದ್ದು ರಕ್ತ ಸಂಗ್ರಹಣಾ

40ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹ
ಯುವಕರು ಹಾಗೂ ಸಾರ್ವಜನಿಕರಿಂದ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 40ಕ್ಕೂ ಹೆಚ್ಚು ಜನ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಆಯೋಜಕರು, ಜನ್ಮ ದಿನದಂತಹ ವಿಶೇಷ ಸಂದರ್ಭಗಳಲ್ಲಿ ಇಂತಹ ಸಮಾಜಮುಖ ಕಾರ್ಯಗಳನ್ನು ಮಾಡುವುದರಿಂದ ಮತ್ತೊಂದು ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಇದೇ ವೇಳೆ ಸನ್ ರೈಸ್ ಫೆಸಿಲಿಟಿ ಸರ್ವಿಸಸ್‌ನ ಪಾಲುದಾರರಾದ ಹರಿಪ್ರಕಾಶ್ ಶೆಟ್ಟಿ, ಮನೋಹರ್ ಕುಮಾರ್ ಎಚ್.ಆರ್., ಭಾಗ್ಯಮ್ಮ ಸೇರಿದಂತೆ
ಪ್ರಮುಖರು ಹಾಗೂ ಸಾಯಿ ಟ್ರಸ್ಟ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದು, ಟಿ.ಎಸ್. ಸಿದ್ದೇಶ್ ಅವರಿಗೆ ಹೂಗುಚ್ಛ ನೀಡಿ ದೀರ್ಘಾಯುಷ್ಯ ಮತ್ತು ಸುಖ-ಶಾಂತಿ ಬಯಸಿ ಶುಭಹಾರೈಸಿದರು.

 

Leave a Reply

Your email address will not be published. Required fields are marked *