ಜೆಎನ್‌ಎನ್‌ಸಿಇ ಕಾಲೇಜಿನಲ್ಲಿ ಜು.24 ಮತ್ತು 25ರಂದು ‘ಯುಸ್ಮಾಟೆಕ್‌ಫೆಸ್ಟ್-2.0′ ರಾಷ್ಟ್ರಮಟ್ಟದ ಎಐ ಹ್ಯಾಕಥಾನ್
ಶಿವಮೊಗ್ಗ:
ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನ ಇನ್‌ಫಾರ್ಮೆಷನ್ ಸೈನ್ಸ್ ವಿಭಾಗ ಹಾಗೂ ಐಇಇಇ ಕಂಪ್ಯೂಟರ್ ಸೊಸೈಟಿ ವಿದ್ಯಾರ್ಥಿ ಘಟಕದ ಸಹಯೋಗದಲ್ಲಿ ಜುಲೈ 24 ಮತ್ತು 25ರಂದು ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ “ಯುಗ್ಯಾ ಟೆಕ್ ಫೆಸ್ಟ್-2.0 ಮೇದದೃಷ್ಟಿ’ ರಾಷ್ಟ್ರಮಟ್ಟದ ಎಐ ಹ್ಯಾಕಥಾನ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ. ವಿಜಯಕುಮಾರ್ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ನವೋದ್ಯಮ ಚಿಂತನೆ, ಸಂಶೋಧನಾ ಮನೋಭಾವ ಹಾಗೂ ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶದಿಂದ ಈ ಹ್ಯಾಕಥಾನ್ ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ಹಗಲು-ರಾತ್ರಿ ನಿರಂತರವಾಗಿ ನಡೆಯುವ ಈ
ಕಾರ್ಯಕ್ರಮದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.
ಹ್ಯಾಕಥಾನ್‌ನ ಮೊದಲ ದಿನ ತಂಡಗಳಿಗೆ ಎರಡು ಪ್ರಮುಖ ವಿಭಾಗಗಳಲ್ಲಿ ಸವಾಲಿನ ವಿಷಯಗಳನ್ನು ನೀಡಲಾಗುತ್ತದೆ. ಮೊದಲ ವಿಭಾಗ, ಕೃತಕ ಬುದ್ದಿಮತ್ತೆ ಮೂಲಕ ವೈದ್ಯಕೀಯ ಚಿತ್ರಗಳ ಗುಣಮಟ್ಟ ಸುಧಾರಣೆ (Al for Medical ಕೃತಕ ಬುದ್ದಿಮತ್ತೆಯ ನೆರವಿನಿಂದ Image Enhancement) ವಿಷಯದಲ್ಲಿ ಎಕ್ಸ್-ರೇ, ಎಂಆರ್‌ಐ, ಸಿಟಿಸ್ಕ್ಯಾನ್ ಮೊದಲಾದ ವೈದ್ಯಕೀಯ ಚಿತ್ರಗಳನ್ನು
ವಿಶ್ಲೇಷಿಸಿ, ಟ್ಯೂಮರ್ ಪತ್ತೆ, ಅಂಗಾಂಗಗಳ ವಿಭಜನೆ, ದೇಹದ ಅಸಹಜತೆಗಳ ಗುರುತಿಸುವಿಕೆ ಹಾಗೂ ವರ್ಗಿಕರಣದ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಉಪಯುಕ್ತ ವಾಗುವ ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಸವಾಲು ನೀಡಲಾಗುತ್ತದೆ ಎಂದರು.
ಎರಡನೇ ವಿಭಾಗ ‘ವಸ್ತು ಗುರುತಿಸುವಿಕೆಗಾಗಿ ಬುದ್ದಿಮತ್ತೆ’ (Al for Object Recognition) ವಿಷಯದಲ್ಲಿ, ಕೃತಕ ಪಡಿಸುವ ಸವಾಲನ್ನು ಒಳಗೊಂಡಿದೆ. ಸ್ವಯಂಚಾಲಿತ ವಾಹನಗಳು, ನೈಜ ಪರಿಸರದಲ್ಲಿ ವಸ್ತುಗಳನ್ನು ಪತ್ತೆಹಚ್ಚುವ ಹಾಗೂ ವರ್ಗಿಕರಿಸುವ ಬುದ್ದಿವಂತ ವ್ಯವಸ್ಥೆಗಳನ್ನು ಅಭಿವೃದ್ಧಿ ಸ್ಟಾರ್ಟ್
ಸರ್ವೆಲೆನ್ಸ್ ಕೈಗಾರಿಕೆಗಳ ಗುಣಮಟ್ಟ ಪರಿಶೀಲನೆ ಸೇರಿದಂತೆ ವಿವಿಧ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಕೃತಕ ಬುದ್ದಿಮತ್ತೆ ಆಧಾರಿತ ಪರಿಹಾರಗಳನ್ನು ರೂಪಿಸಲಿದ್ದಾರೆ ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡುವ ತಂಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳ ರೂಪದಲ್ಲಿ ಒಟ್ಟು ಸುಮಾರು 2 ಲಕ್ಷ ರೂ. ನಗದು ಬಹುಮಾನ ವಿತರಿಸಲಾಗುವುದು.
ಜುಲೈ 24ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಖ್ಯಾತ ಉದ್ಯಮಿ ಎಸ್. ರುದ್ರೇಗೌಡ ಅವರು ಉದ್ಘಾಟಿಸಲಿದ್ದು, ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಜಿ.ಎಸ್.
ನಾರಾಯಣರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಎನ್‌ಇಎಸ್ ಕಾರ್ಯದರ್ಶಿ ನಾಗರಾಜ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್ ಹಾಗೂ ಡಾ. ರಾಘವೇಂದ್ರ ಆರ್.ಜೆ. ಉಪಸ್ಥಿತರಿರುವರು ಎಂದರು.
ಜುಲೈ 25ರಂದು ಶನಿವಾರ ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕರಾದ ಡಾ. ಅರ್ಚನಾ ಮತೂರ್ ಸಮಾರೋಪ ಭಾಷಣ ಮಾಡಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಹ ಕಾರ್ಯದರ್ಶಿ ಡಾ. ಪಿ. ನಾರಾಯಣ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಪ್ರಾಂಶುಪಾಲ ಡಾ. ವೈ. ವಿಜಯ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಸಂಘಟನಾ ಸಮಿತಿಯ ಸದಸ್ಯರಾದ ಡಾ. ಆರ್.ಜೆ. ರಾಘವೇಂದ್ರ, ಡಾ. ಪವನ್ ಕುಮಾರ್ ಎಂ.ಪಿ., ಡಾ. ಸಂಜೀವ್ ಕುಂಟೆ, ಅರುಣ್ ಕುಮಾರ್ ಪಿ., ಮನೀಷಾ ಕೆ.ಎಂ. ಹಾಗೂ ವಿಶ್ವತ ರಾಣಿ ಎಸ್.ಎನ್



