ಛಾಪು ಮೂಡಿಸುವಂತಹ ಕೆಲಸ ಮಾಡುವೆ : ಸಚಿವ ಮಧು ಬಂಗಾರಪ್ಪ

ಛಾಪು ಮೂಡಿಸುವಂತಹ ಕೆಲಸ ಮಾಡುವೆ : ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ : ನಾವೆಲ್ಲ ಪಕ್ಷದ ಶಿಸ್ತಿನ ಸಿಪಾಯಿಗಳು, ಹೈಕಮಾಂಡ್ ತೀರ್ಮಾನಕ್ಕೆ ಬೆಲೆ ಕೊಡುತ್ತೇವೆ. ಒಮ್ಮೆ ಆಯ್ಕೆಯಾದ ಮೇಲೆ ಎಲ್ಲರೂ ಜೊತೆಯಾಗಿ ಹೋಗಬೇಕು. ಅಸಮಾಧಾನ ಕೆಲವರಲ್ಲಿ ಇರಬಹುದು. ಪಕ್ಷದ ಹಿತದೃಷ್ಟಿಯಿಂದ ಎಲ್ಲಾ ಹಿರಿಯರು, ಕಿರಿಯರು, ಕಾರ್ಯಕರ್ತರು ಜೊತೆಯಾಗಿ ಹೋಗಬೇಕು, ಮಂತ್ರಿಯಾಗಿ ಒಂದು ಚಾಪು ಮೂಡಿಸುತ್ತೇನೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಪ್ರೀತಿಯಿಂದ ಯಾವುದೇ ಖಾತೆ ಕೊಟ್ಟರೂ ಯಶಸ್ವಿಯಾಗಿ ನಿರ್ವಹಿಸುತ್ತೇನೆ. ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ರೀತಿಯಲ್ಲಿ ಕೆಲಸ ಮಾಡಬೇPಕು. ಗೊಂದಲಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಧ್ಯಮದಲ್ಲಿ ನೋಡಿದ್ದೇನೆ. ಸೋಮವಾದ ವೇಳೆಗೆ ಖಾತೆ ಹಂಚಿಕೆ ಆಗಬಹುದು. ಬೇಳೂರು ಗೋಪಾಲಕೃಷ್ಣ ಹಾಗೂ ಬಿ.ಕೆ. ಸಂಗಮೇಶ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆಅವರಿಗೆ ಸಚಿವ ಸ್ಥಾನ ದೊರಕಿಲ್ಲ. ಇದರಿಂದ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ. ಅವರನ್ನು ಇನ್ನು ಭೇಟಿ ಆಗಿ ಅವರೊಂದಿಗೆ ಮಾತನಾಡುತ್ತೇನೆ ಎಂದರು.
ಅಭಿವೃದ್ಧಿ ವಿಚಾರವಾಗಿ ಅವರಿಬ್ಬರೂ ಎಲ್ಲಾ ರೀತಿಯ ಸಹಕಾರ ನೀಡಿದ್ದರು. ಈ ಬಾರಿ ಅಂತಹ ಸಹಕಾರವನ್ನು ಬಯಸುತ್ತೇನೆ. ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿವೆ, ನನಗೆ ಅದರ ಅರಿವಿದೆ. ಕುಡಿಯುವ ನೀರು, ಹಕ್ಕುಪತ್ರ, ಅರಣ್ಯ ಭೂಮಿ, ಸೇರಿದಂತೆ ಅನೇಕ ಸಮಸ್ಯೆ ಇದೆ. ಅದನ್ನು ಬಗೆಹರಿಸುವಲ್ಲಿ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದರು.
ಪ್ರಾಸಾವಿಕ ಮಾತನಾಡಿದ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ಎಲ್ಲರಿಗೂ ಮಂತ್ರಿ ಸ್ಥಾನ ಸಿಗುವುದು ಕಷ್ಟ ಕೇವಲ ೩೫ ಮಂತ್ರಿ ಸ್ಥಾನಗಳಿವೆ. ಹೈ ಕಮಾಂಡ್ ನೀಡಿದ ತೀರ್ಮಾನವನ್ನು ಎಲ್ಲರೂ ಗೌರವಿಸಬೇಕು. ಪಕ್ಷದಲ್ಲಿ ಯಾವುದೇ ಬಣಗಳಿಲ್ಲ. ಶುಕ್ರವಾರ ಸಣ್ಣಪುಟ್ಟ ಗೊಂದಲಗಳಾಗಿವೆ. ಎರಡು ಕಡೆಯವರನ್ನು ಕರೆಸಿ ಮಾತನಾಡಿದ್ದೇನೆ. ನಿನ್ನೆ ಸಂಜೆ ನಡೆದ ಘಟನೆಯ ಬಗ್ಗೆ ಕಾರ್ಯಕರ್ತರು ದೂರ ನೀಡಿದ್ದಾರೆ. ಆ ಸಂದರ್ಭದಲ್ಲಿ ತಳ್ಳಾಟ ನೂಕಾಟವಾಗಿದೆ. ಅದು ಪಕ್ಷದ ವಿಚಾರವಲ್ಲ. ಅವರ ವೈಯಕ್ತಿಕ ಕಾರಣಕ್ಕೆ ಸ್ವಲ್ಪ ಗೊಂದಲವಾಗಿದೆ. ಇಬ್ಬರನ್ನು ಕರೆಸಿ ಸಮಾಧಾನ ಪಡಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪಕ್ಷರ ಮುಖಂಡರಾದ ಎನ್.ರಮೇಶ್, ಕಲಗೋಡು ರತ್ನಾಕರ್, ಸಯ್ಯದ್ ವಾಹೀದ್ ಅಡ್ಡು, ಜಿ.ಡಿ.ಮಂಜುನಾಥ್, ಚಂದ್ರಭೂಪಾಲ್, ಎಸ್.ರವಿಕುಮಾರ್, ಶಿವಕುಮಾರ್, ಚೇತನ್ ಗೌಡ, ಗಿರೀಶ್, ಚಿನ್ನಪ್ಪ, ಶಿವಾನಂದ್ ಸ್ಟೆಲ್ಲಾ ಮಾರ್ಟಿನ್, ಶ್ವೇತಾ ಬಂಡಿ. ಚಂದ್ರಶೇಖರ್ ಮೊದಲಾದವರಿದ್ದರು.

 

Leave a Reply

Your email address will not be published. Required fields are marked *