ಮತದಾರರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ : ನೂತನ ಸಚಿವ ಮಧುಬಂಗಾರಪ್ಪ

ಮತದಾರರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ : ನೂತನ ಸಚಿವ ಮಧುಬಂಗಾರಪ್ಪ

ಸೊರಬ : ಜನರು ತಮ್ಮ ಮೇಲೆ ಅಭಿಮಾನದ ವಿಶ್ವಾಸವಿಟ್ಟು ತೋರಿದ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಪ್ರೀತಿಯು ಅಧಿಕಾರ ಅವಧಿ ಯಲ್ಲಿ ಕರ್ತವ್ಯ ಪ್ರಜ್ಞೆಗೆ ಮತ್ತಷ್ಟು ಶಕ್ತಿ ನೀಡುತ್ತದೆ, ಎಂದು ನೂತನ ಸಚಿವ ಮಧುಬಂಗಾರಪ್ಪ ಹೇಳಿದರು.
ಪಟ್ಟಣದ ರಂಗಮಂದಿರದಲ್ಲಿ ಇಂದು ತಾಲ್ಲೂಕ್ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು,ಎಸ್ ಬಂಗಾರಪ್ಪ ಅಭಿಮಾನಿಗಳು ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ
ನೀಡಿದ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ರಾಜಕಾರಣದಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಸೋಲನ್ನು ನಾವೇ ಅನುಭವಿಸಿ ಗೆಲುವನ್ನು ನಿಮ್ಮೆಲ್ಲರ ಜೊತೆ ಹಂಚಿಕೊಂಡಾಗ ಆತ್ಮತೃಪ್ತಿ ನಮ್ಮದಾಗಲಿದೆ. ನನ್ನ ತಂದೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನ ವರಿಗೆ ನೀವು ನೀಡಿದ ಶಕ್ತಿ ನಿಮ್ಮ ಮೂಲಕ ನನಗೆ ಸಿಗುತ್ತಿರುವುದು ಸಂತೋಷ ತಂದಿದೆ ಎಂದರು.

ಇಡಿ ರಾಜ್ಯದಲ್ಲಿ ಶಿಕ್ಷಣ ಇಲಾಖೆ ದೊಡ್ಡ ಜವಾಬ್ದಾರಿ ಸ್ಥಾನದಲ್ಲಿದ್ದು, ಸಿದ್ದರಾಮಯ್ಯ ಸರ್ಕಾರದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟು ಶಿಕ್ಷಣಮಂತ್ರಿ ಯನ್ನಾಗಿ ಮಾಡಿದ್ದರು. ಮಕ್ಕಳಿಗೆ ಶಿಕ್ಷಣ ನೀಡುವುದು ದೇವರಿಗೆ ಸಮಾನವಾಗಿದೆ, ಮಂತ್ರಿಯಾಗಿ ನನ್ನ ಜವಾಬ್ದಾರಿಯನ್ನು ಅರಿತು ಶಿಕ್ಷಣಕ್ಕೆ ಪೂರಕವಾದ ಅನೇಕ ಬದಲಾವಣೆ ತರುವ ಮೂಲಕ ಉತ್ತಮವಾಗಿ ಕಾರ್ಯ ನಿರ್ವಹಿಸಿದ ತೃಪ್ತಿ ನನಗಿದೆ ಈ ಅವಧಿಯಲ್ಲಿ ಸಾಕಷ್ಟು ಟೀಕೆ ಟಿಪ್ಪಣಿಗಳು ಬಂದವು, ಆದರೆ ಟೀಕೆಗಳು ಸಾಯುತ್ತವೆ, ನಾವು ಮಾಡುವ ಉತ್ತಮ ಕೆಲಸಗಳು ನಮ್ಮ ಜೊತೆ ಇರುತ್ತವೆ ಎನ್ನುವುದಕ್ಕೆ ನಾನು ಮತ್ತೆ ಸಚಿವನಾಗಿರುವುದು ಸಾಕ್ಷಿಯಾಗಿದೆ, ನೀವು ನನ್ನ ಮೇಲೆ ನಂಬಿಕೆ ಇಟ್ಟು ಹಾಕಿದ ಮತಕ್ಕೆ ಧಕ್ಕೆಯಾಗದ ರೀತಿ ರಾಜಕಾರಣದಲ್ಲಿ ಮುಂದುವರಿಯುತ್ತೇನೆ, ಮುಂದಿನ ಎರಡು ವರ್ಷದ ಅವಧಿಯಲ್ಲಿ ತಾಲ್ಲೂಕಿನ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ದೇವರಾಜ್ ಅರಸು ಅಭಿವೃದ್ಧಿ ನಿಗಮ, ತಾ ಪಂ ಹಾಗು ಕೈಗಾರಿಕೆ ಇಲಾಖೆ ಗಳಲ್ಲಿನ ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನು ಭವಿಗಳಿಗೆ ಸವಲತ್ತು ಗಳನ್ನು ವಿತರಿಸಲಾಯಿತು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಡಿ.ಬಿ. ಅಣ್ಣಪ್ಪ, ಸದಾನಂದಗೌಡ, ಹೆಚ್ ಗಣಪತಿ, ತಹಸೀಲ್ದಾರ್ ಪುರಂದರ, ಇ ಒ ಶಶಿಧರ್, ರುದ್ರಗೌಡ, ತಬಲಿ ಬಂಗಾರಪ್ಪ, ದಯಾನಂದಗೌಡ, ಎಂ.ಡಿ. ಶೇಖರ್, ಕೆ.ವಿ. ಗೌಡ. ಇನ್ನಿತರರಿದ್ದರು.

Leave a Reply

Your email address will not be published. Required fields are marked *