ಡಿ .ಕೆ. ಶಿವಕುಮಾರ್ ರವರ ಪ್ರಮಾಣವಚನ ಮಂಜುನಾಥ ಚಿತ್ರ ಮಂದಿರದಲ್ಲಿ ಸಾರ್ವಜನಿಕರಿಗೆ ನೇರ ಪ್ರಸಾರ, ಸಿಹಿ ವಿತರಣೆ

ಡಿ .ಕೆ. ಶಿವಕುಮಾರ್ ರವರ ಪ್ರಮಾಣವಚನ ಮಂಜುನಾಥ ಚಿತ್ರ ಮಂದಿರದಲ್ಲಿ ಸಾರ್ವಜನಿಕರಿಗೆ ನೇರ ಪ್ರಸಾರ, ಸಿಹಿ ವಿತರಣೆ
ಶಿವಮೊಗ್ಗ : ಹಾಪ್ ಕಾಮ್ಸ್ ನಿರ್ದೇಶಕ ಡಾ . ಶರತ್ ಮರಿಯಪ್ಪ  ರವರ  ನೇತೃತ್ವದಲ್ಲಿ ಡಿ. ಕೆ . ಶಿವಕುಮಾರ್ ರವರು ಮುಖ್ಯ ಮಂತ್ರಿಗಳಾಗಿ ಅಧಿಕಾರ ಸ್ವೀಕಾರದ ಹಿನ್ನಲೆಯಲ್ಲಿ ನಗರದ ಮಂಜುನಾಥ ಚಿತ್ರ ಮಂದಿರದಲ್ಲಿ ಸಾರ್ವಜನಿಕರಿಗೆ ಪ್ರಮಾಣವಚನ ಸ್ವೀಕಾರದ ಕಾರ್ಯಕ್ರಮದ ನೇರ ಪ್ರಸಾರವನ್ನು ದೊಡ್ಡ ಪರದೆಯ ಮೂಲಕ ವೀಕ್ಷಣೆಗೆ ಅನುಕೂಲ ಮಾಡಿಕೊಡಲಾಗಿತ್ತು .
ಅಲ್ಲದೆ ಸಾರ್ವಜನಿಕರಿಗೆ ಸಿಹಿ ವಿತರಿಸಿ , ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಎಸ್ .ಕೆ. ಮರಿಯಪ್ಪ , ಕೆ. ರಂಗನಾಥ್ , ಪ್ರವೀಣ್ ಕುಮಾರ್ ,ಗಿರೀಶ್, ಕೇಶವ ,ಮಸ್ಕನ್,  ಸೇರಿದಂತೆ ಸೀಗೆಹಟ್ಟಿ , ಬಿ.ಬಿ. ಸ್ಟ್ರೀಟ್ , ಕುಂಬಾರ ಗುಂಡಿಯ ಪ್ರಮುಖರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *