ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘ ಅಧ್ಯಕ್ಷ ಆರ್.ಮೋಹನ್ ನೇತೃತ್ವದಲ್ಲಿ ಡಿ.ಕೆ. ಶಿವಕುಮಾರ್ ಅವರ ೬೫ನೇ ಹುಟ್ಟುಹಬ್ಬದ ವಾಲಿಬಾಲ್ ಕ್ರೀಡಾಕೂಟ,ಕ್ರೀಡಾಪಟುಗಳಿಗೆ ಸನ್ಮಾನ
ಶಿವಮೊಗ್ಗ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ೬೫ನೇ ಹುಟ್ಟುಹಬ್ಬದ ಅಂಗವಾಗಿ ಮೇ.೧೫ರ ಶುಕ್ರವಾರ ನೆಹರೂ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೧೧ಗಂಟೆಗೆ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘ ಶಿವಮೊಗ್ಗದವತಿಯಿಂದ ರಾಜ್ಯ, ರಾಷ್ಟç ಮತ್ತು ಅಂತರಾಷ್ಟಿçÃಯ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಒಂದು ದಿನದ ಜಿಲ್ಲಾ ಮಟ್ಟದ ವಾಲಿಬಾಲ್ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್.ಮೋಹನ್ ಹೇಳಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವ ಮಧುಬಂಗಾರಪ್ಪ ಮಾಡಲಿದ್ದು, ಕುಣಿಗಲ್ ಶಾಸಕ ಡಾ.ರಂಗನಾಥ್ ಉಪಸ್ಥಿತರಿರುವರು. ಕ್ರೀಡಾಕೂಟಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ್‌ಗೌಡ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಆರ್.ಮೋಹನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮುಕ್ತಾಯ ಸಮಾರಂಭದಲ್ಲಿ ಬಹುಮಾನ ವಿತರಣೆಯನ್ನು ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ನೆರವೇರಿಸುವರು.
ದೇಶದ ಹೆಮ್ಮೆಯ ಕ್ರೀಡಾಪಟುಗಳಿಗೆ ಗೌರವಾರ್ಪಣೆ ನಡೆಯಲಿದ್ದು, ಅಂತರಾಷ್ಟಿçÃಯ ಅಥ್ಲೆಟಿಕ್ಸ್ ಕ್ರೀಡಾಪಟು ಹಾಗೂ ತರಬೇತುದಾರರಾದ ಸತ್ಯನಾರಾಯಣ್, ಏಕಲವ್ಯ ಪ್ರಶಸ್ತಿ ವಿಜೇತ ಎಸ್.ಆರ್.ಅಶೋಕ್, ರಾಷ್ಟಿçÃಯ ವಾಲಿಬಾಲ್ ತರಬೇತುದಾರರಾದ ಅಸ್ಲಾಂಪಾಷಾ, ಜಯಪ್ರಕಾಶ್ ಕಳ್ಳಿ, ರಾಷ್ಟಿçÃಯ ವಾಲಿಬಾಲ್ ತರಬೇತಿದಾರರಾದ ಕೆ.ಎಸ್.ಶಶಿ, ಬಸವರಾಜ್ ಹೊಸಮಠ, ರವೀಂದ್ರ ಟಿ.ಬಿ., ಜಿ.ಅಶ್ವಿನಿ, ಟಿ.ಜಿ.ಶಂಕರ್, ಆರ್.ಮೋಹನ್‌ಕುಮಾರ್, ಮೈಕಲ್ ಕಿರಣ್, ವಿಜಯಕುಮಾರ್, ದೈಹಿಕ ಶಿಕ್ಷಕ ಚಂದ್ರಪ್ಪ, ಕ್ರೀಡಾಪಟುಗಳಾದ ಯಶವಂತ್‌ನಾಯಕ್, ಗಿರೀಶ್, ಉದಯ್‌ಕುಮಾರ್ ಸೇರಿದಂತೆ ೧೪ ಕ್ರೀಡಾಪಟುಗಳನ್ನು ಸನ್ಮಾನಿಸಲಾಗುವುದು ಎಂದರು.
ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಪ್ರಶಸ್ತಿಪತ್ರ ಹಾಗೂ ಪದಕ ವಿತರಣೆ ಇರುತ್ತದೆ. ಈಗಾಗಲೇ ೧೦ ವಾಲಿಬಾಲ್ ತಂಡಗಳು ಹೆಸರು ನೊಂದಾಯಿಸಿದೆ. ಅದರಲ್ಲಿ ಒಂದು ಮಹಿಳಾ ತಂಡವೂ ಇದ್ದು ವಿಜೇತ ತಂಡಕ್ಕೆ ಪ್ರಥಮ ಬಹುಮಾನ ೨೫,೦೦೦ ರೂ., ದ್ವಿತೀಯ ೧೫,೦೦೦, ತೃತೀಯ ೧೦,೦೦೦ ಹಾಗೂ ಚತುರ್ಥ ೫೦೦೦ ರೂ.ಗಳ ಬಹುಮಾನವಿರುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಂಗರಾಜ್, ಸುನೀಲ್, ಸಿದ್ಧಪ್ಪ, ಅಶೋಕ್, ಮೊದಲಾದವರಿದ್ದರು.


