ಮಲೆನಾಡು ಮುದ್ರಕರ ಸಂಘದ ನೂತನ ಅಧ್ಯಕ್ಷರಾಗಿ ಗಣೇಶ್ ಬಿಳಿಗಿ ಅಧಿಕಾರ ಪದಗ್ರಹಣ…

ಮಲೆನಾಡು ಮುದ್ರಕರ ಸಂಘದ ನೂತನ ಅಧ್ಯಕ್ಷರಾಗಿ ಗಣೇಶ್ ಬಿಳಿಗಿ ಅಧಿಕಾರ ಪದಗ್ರಹಣ…

ಹಸಿವಿದ್ದವರು ಆಹಾರ ಅರಸುತ್ತಾರೆ  : ಬಿ.ಎಸ್ ಗಣೇಶ್

ಶಿವಮೊಗ್ಗ ಮೇ 18.  ಹಸಿವೆ ಇದ್ದವರು ಆಹಾರ ಅರಸುತ್ತಾರೆ ಎಂದು ಮಲೆನಾಡು ಮುದ್ರಕರ ಸಂಘದ ನೂತನ ಅಧ್ಯಕ್ಷರಾದ ಬಿ.ಎಸ್.ಗಣೇಶ್ ಹೇಳಿದರು, ಅವರು ಇಲ್ಲಿನ ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದಲ್ಲಿ ನಡೆದ ಮಲೆನಾಡು ಮುದ್ರಕರ ಸಂಘದ ನೂತನ ಪದಾಧಿಕಾರಿಗಳ ಅಧಿಕಾರ ಪದಾಗ್ರಹಣ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ನಮ್ಮ ಮುದ್ರಣಾಲಯದ ಕಾರ್ಮಿಕರು ಇದೂವರೆಗೂ ಸರ್ಕಾರದ ಕಾರ್ಮಿಕ ಇಲಾಖೆಯ ಯಾವುದೇ ಕಚೇರಿಯಲ್ಲಿಯು ನೋಂದಾವಣೆ ಮಾಡಿಸಿಲ್ಲ ಈ ಬಗ್ಗೆ ಕಾರ್ಮಿಕ ಕಲ್ಯಾಣ ಇಲಾಖೆಯ ಕಛೇರಿಗೆ ಸಂಪರ್ಕಿಸಿದಾಗ ಅವರು ಹಸಿವಿದ್ದ ಕಾರ್ಮಿಕರು ಮಾತ್ರವೇ ತಮ್ಮ ಹೆಸರನ್ನು ನೋಂದಣಿ ಮಾಡಿಸುತ್ತಾರೆ ಎಂದರು.ಇದು ನಮ್ಮ ಕಾರ್ಮಿಕರಲ್ಲಿ ಇರುವ ಅಜ್ಞಾನ ವೇ ಹೊರತು ಬೇರೆ ಉದ್ದೇಶಕ್ಕೆ ಮಾಡಿರುವುದು ಅಲ್ಲ ಹಾಗಾಗಿ ಕಾರ್ಮಿಕರು ಕೂಡಲೇ ತಮ್ಮ ಹೆಸರನ್ನು ನೋಂದಾಯಿಸಿ ಏಕೆಂದರೆ ಕಾರ್ಮಿಕರಿಗೆ ಏನು ಉಪಯೋಗ ಆಗದಿದ್ದರೂ ಕೂಡ ಅವರ ಕುಟುಂಬ ದವರಿಗಾದರು ಕೆಲವು ಸರ್ಕಾರಿ ಸೌಲಭ್ಯ ಸಿಗುತ್ತದೆ ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.

ನಿಕಟಪೂರ್ವ ಅಧ್ಯಕ್ಷರಾದ ಮಾಧವಾಚಾರ್ ಮಾತನಾಡಿ ಈ ಹಿಂದಿನ ಪ್ರಥಮ ಅಧ್ಯಕ್ಷರಾದ ಪ್ರಗತಿ ನಾರಾಯಣರಾವ್ ರಿಂದ ಹಿಡಿದು ಸಂಘ ನಡೆದು ಬಂದ ದಾರಿ ತಾವು ಮಾಡಿದ ಕೆಲಸ ವಿವರಿಸಿದರು.ಡಾ.ಕೆ.ಜಿ.ವೆಂಕಟೇಶ್ ರವರು ಗಣೇಶ್ ರವರ ಬಗ್ಗೆ ಅಭಿನಂದನಾ ನುಡಿಗಳನ್ನು ಆಡಿ ಗಣೇಶ್ ರವರ ವ್ಯಕ್ತಿತ್ವದ ಪರಿಚಯ ಮಾಡಿ ಕೊಟ್ಟರು.ಕುಮಾರ ಅನುರೂಪ್ ಜಿ ಬಿಳಗಿ ಯವರು ಮುದ್ರಣ ಕಲೆಯ ಇತಿಹಾಸವನ್ನು ತಿಳಿಸಿ ಜಾನ್ ಗುಟೇನ್ ಬರ್ಗ್ ಮಾಡಿದ ಕೆಲಸವನ್ನು ತಿಳಿಸಿದರು.ಸಮಾರಂಭದಲ್ಲಿ ಸ್ವಾಗತವನ್ನು ಮಲೆನಾಡು ರವಿ, ವಂದನಾರ್ಪಣೆಯನ್ನು ಆರ್ ಮಂಜುನಾಥ್, ನಿರೂಪಣೆಯನ್ನು ಮುರುಳೀಧರ್ ಮಾಡಿದರು.
ಮಲೆನಾಡು ಮುದ್ರಕರ ಸಂಘದ ನೂತನ ಅಧ್ಯಕ್ಷರಾಗಿ ಗಣೇಶ್ ಬಿಳಿಗಿ ಉಪಾಧ್ಯಕ್ಷರಾಗಿ ರಮೇಶ್ ಎನ್.ಎಸ್, ರವಿ ಬಿ.ಇ.,, ಕಾರ್ಯದರ್ಶಿಯಾಗಿ ಕೃಷ್ಣ ಎನ್.ಹೆಚ್., ಸಹ ಕಾರ್ಯದರ್ಶಿಯಾಗಿ ಹೆಚ್.ಸಿ. ಮುರುಳಿಕೃಷ್ಣ , ಸಂಘಟನಾ ಕಾರ್ಯದರ್ಶಿಯಾಗಿ ಹರೀಶ್‌ನಾಯಕ, ಖಜಾಂಚಿಯಾಗಿ ವೆಂಕಟೇಶ್‌ನಾಯಕ, ಆಯ್ಕೆಯಾಗಿದ್ದು ಮುಖ್ಯ ಸಲಹೆಗಾರರಾಗಿ ಆರ್. ಮಂಜುನಾಥ್ ಮತ್ತು ನಿರ್ದೇಶಕರುಗಳಾಗಿ ಯೋಗೇಶ್ ಎನ್.ಜಿ., ಶ್ರೀನಿವಾಸ್ ಪಿ., ಕೆ.ಟಿ. ಮೋಹನ್, ಸುನೀಲ್ ಸರೋದೆ, ಎಂ.ಎಸ್. ರೇವಣ್ಣ, ಜೆ.ಎನ್. ಚಂದ್ರಾಚಾರಿ, ಗುರುಮೂರ್ತಿ ಎನ್. ಓ. ಆಯ್ಕೆಯಾಗಿದ್ದು ಎಲ್ಲರಿಗೂ ಪುಷ್ಪ ಮತ್ತು ಬ್ಯಾಡ್ಜ್ ನೀಡುವುದರ ಮೂಲಕ ವೇದಿಕೆಗೆ ಆಹ್ವಾನಿಸಲಾಗಿತ್ತು

Leave a Reply

Your email address will not be published. Required fields are marked *