ರಿಷಿತ್ ಎಸ್.   ದ್ವಿತೀಯ ಪಿಯುಸಿಯಲ್ಲಿ 98%   ಸಾಧನೆ

ರಿಷಿತ್ ಎಸ್.   ದ್ವಿತೀಯ ಪಿಯುಸಿಯಲ್ಲಿ   98%    ಸಾಧನೆ

ಶಿವಮೊಗ್ಗ: ನಗರದ ಕಾಶಿಪುರ ಮುಖ್ಯ ರಸ್ತೆಯಲ್ಲಿ ವಾಸವಾಗಿರುವ ಸತೀಶ್ ಆರ್ ಹಾಗೂ ಡಾ. ಹೇಮಲತಾ ಎಲ್.ಎಂ ಅವರ ಸುಪುತ್ರ ರಿಷಿತ್ ಎಸ್. ಮಂಚೇನಹಳ್ಳಿ ಅವರು 2025–26ನೇ ಸಾಲಿನ ಮಾರ್ಚ್/ಏಪ್ರಿಲ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

600 ಅಂಕಗಳಿಗೆ 588 ಅಂಕಗಳನ್ನು (98%) ಗಳಿಸುವ ಮೂಲಕ ರಿಷಿತ್ ಅವರು ತಮ್ಮ ಕಾಲೇಜು ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ. ಇವರು ಕಾರ್ಕಳ ತಾಲೂಕಿನ ಜ್ಞಾನಸುಧ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ತಮ್ಮ ಪರಿಶ್ರಮ ಮತ್ತು ನಿಷ್ಠೆಯಿಂದ ಈ ಸಾಧನೆಗೈದಿದ್ದಾರೆ.

ರಿಷಿತ್ ಅವರ ಈ ಸಾಧನೆಗೆ ಶಿಕ್ಷಕರು, ಸ್ನೇಹಿತರು ಹಾಗೂ ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದು, ಭವಿಷ್ಯದಲ್ಲೂ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವಂತೆ ಶುಭಾಶಯಗಳನ್ನು ತಿಳಿಸಿದ್ದಾರೆ.

Leave a Reply

Your email address will not be published. Required fields are marked *