ಪೇಸ್ ಕಾಲೇಜಿಗೆ ಶೇ. 99.42 ಫಲಿತಾಂಶ : ಮಹೀನ್ ಖಾನಮ್ ಅಫ್ರಿದಿಗೆ ರಾಜ್ಯಮಟ್ಟದಲ್ಲಿ 4ನೇ ರಾಂಕ್ ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ

ಪೇಸ್ ಕಾಲೇಜಿಗೆ ಶೇ. 99.42 ಫಲಿತಾಂಶ
ಮಹೀನ್ ಖಾನಮ್ ಅಫ್ರಿದಿಗೆ ರಾಜ್ಯಮಟ್ಟದಲ್ಲಿ 4ನೇ ರಾಂಕ್ ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ .

ಶಿವಮೊಗ್ಗ : ಪೇಸ್.ಪಿ.ಯು. ಕಾಲೇಜಿನಲ್ಲಿ ಈ ಬಾರಿ 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀ ಕ್ಷೆಯ ಫಲಿತಾಂಶ 99.42 ಆಗಿದ್ದು, ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯದಲ್ಲೇ 4ನೇ ಸ್ಥಾನ ಪಡೆದಿದೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆಯ ಬೇಕೆಂಬು ದು ನಮ್ಮೆಲ್ಲರ ಆಶಯವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಪೋಷಕರ ಪ್ರಯತ್ನದಿಂದ ಉತ್ತಮ ಫಲಿತಾಂಶ ಬಂದಿದೆ. ಹೆಚ್ಚಿನ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದ ನೆಯನ್ನು ಅವರು ಸಲ್ಲಿಸಿದರು.

ಸಂಸ್ಥೆಯ ಖಜಾಂಚಿ ಕೆ.ಈ. ಕಾಂತೇಶ್ ಮಾತನಾಡಿ, ಒಟ್ಟಿಗೆ 697 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾ ಗಿದ್ದು, 693 ವಿದ್ಯಾರ್ಥಿಗಳು ಪಾಸಾಗಿದ್ದು, ಅದರಲ್ಲಿ ಅತ್ಯುತ್ತಮ ಶ್ರೇಣಿ 479, ಪ್ರಥಮ ದರ್ಜೆ 210, ದ್ವಿತೀಯ ದರ್ಜೆ 4 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಹಿಂದಿ-2, ಸಂಸ್ಕೃತ

ಪೇಸ್ ಪಿ.ಯು. ಕಾಲೇಜಿನಲ್ಲಿ ಈ ಬಾರಿ 2025- 26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ 99.42 ಆಗಿದ್ದು, ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯದಲ್ಲೇ 4ನೇ ಸ್ಥಾನ ಪಡೆದಿದೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆಯ ಬೇಕೆಂಬುದು ನಮ್ಮೆಲ್ಲರ ಆಶಯ ವಾಗಿದೆ.
ಪೇಸ್ ಕಾಲೇಜಿನ ಉಪ ನ್ಯಾ ಸಕರು, ಸಿಬ್ಬಂದಿಗಳು, ವಿದ್ಯಾ ರ್ಥಿಗಳು ಮತ್ತು ಪೋಷಕರ ಪ್ರಯ ತ್ನದಿಂದ ಉತ್ತಮಫಲಿತಾಂಶ ಬಂದಿದೆ. ಹೆಚ್ಚಿನ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ .

-50, ಭೌತಶಾಸ್ತ್ರ-12, ರಾಸಾಯನ ಶಾಸ್ತ್ರ-01, ಗಣಿತಶಾಸ್ತ್ರ-40, ಜೀವ ಶಾಸ್ತ್ರ-5, ಕಂಪ್ಯೂಟರ್ ಸೈನ್ಸ್ ನಲ್ಲಿ-37 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ನಮ್ಮ ಈ ಸಾಧನೆಯ ವಿಶೇಷ ವೇನೆಂದರೆ ನಮ್ಮ ಕಾಲೇಜಿನ
ಮಕ್ಕಳಿಗೆ ಟ್ಯೂ ಷನ್‌ಗೆ ಹೋಗುವ ಅಗತ್ಯವೇ ಇರುವುದಿಲ್ಲ. ನಮ್ಮಲ್ಲೇ ಎಲ್ಲಾ ಸೌಲಭ್ಯ ಮತ್ತು ಮಾರ್ಗ ದರ್ಶನ ಸಿಗುವು ದರಿಂದ ಹೊರಗಡೆ ಹೋಗುವ ಅವಕಾಶವೇ ಇಲ್ಲ. ಆದ್ದರಿಂದ ಉತ್ತ ಮ ಫಲಿತಾಂಶ ಬಂದಿದೆ ಎಂದರು.
ಮಹೀನ್ ಖಾನಮ್ ಅಫ್ರಿದಿ 600ಕ್ಕೆ 596 ಅಂಕ ಪಡೆದಿದ್ದು, ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾಳೆ. ಸಾದ್ವಿ ಎಂ. ಎಸ್. 594 ಅಂಕ ಪಡೆದು ಜಿಲ್ಲೆಗೆ ತೃತೀಯ ಹಾಗೂ ರಾಜ್ಯಕ್ಕೆ 6ನೇ ಸ್ಥಾನ ಪಡೆದಿದ್ದಾಳೆ. ಅಂಕಿತ್ ಯು.ವಿ.
589, 3 . 5 589, ಸಿಂಚನ ಪಿ.ಓ. 589 ಅಂಕ ಗಳಿಸಿ ಕಾಲೇಜಿಗೆ 3ನೇ ಸ್ಥಾನ ಪಡೆದಿದ್ದಾರೆ.
ಪ್ರಾಂಶುಪಾಲರಾದ ಆನಂದ್ ಮಾತನಾಡಿ, ಕೆ.ಎಸ್. ಈಶ್ವರಪ್ಪ ಮತ್ತು ಕೆ.ಈ.ಕಾಂತೇಶ್ ಆಡಳಿ ತಾತ್ಮಕವಾಗಿ ಸಂಪೂರ್ಣ ಸಹಕಾರ ನೀಡಿ, ಶೈಕ್ಷಣಿಕ ಮಾರ್ಗದರ್ಶನ, ಸಲಹೆ-ಸೂಚನೆ ನೀಡುತ್ತಾ ಬಂದಿ ದ್ದರಿಂದ ಮತ್ತು ಪೂರ್ಣ ಸ್ವಾತಂತ್ರ್ಯ ನೀಡಿದ್ದರಿಂದ ಕಾಲೇಜು ಯಶಸ್ವಿ ಯಾಗಿ ಉತ್ತಮ ಉಪನ್ಯಾಸಕರ ಸಹಕಾರದಿಂದ ಈ ಹಂತ ತಲುಪಲು ಸಾಧ್ಯವಾಗಿದೆ ಎಂದರು.
ಹೆಚ್ಚಿನ ಅಂಕಗಳಿಸಿದ ಮಹೀನ್ ಖಾನಮ್ ಅಫ್ರಿದಿ ಮಾತನಾಡಿ, ಕಾಲೇಜಿನಲ್ಲಿ ಉತ್ತಮ ಶಿಕ್ಷಣದ ಜೊತೆಗೆ ಎಲ್ಲಾ ಉಪನ್ಯಾಸಕರ ಉತ್ತಮ ಮಾರ್ಗದರ್ಶನ ಸಲಹೆ ಮತ್ತು ನಮಗೆ ಯಾವುದೇ ಅನುಮಾ ನವಿದ್ದರೂ ವಿಶೇಷವಾಗಿ ಕರೆದು ಮಾರ್ಗದರ್ಶನ ನೀಡಿದ್ದ ರಿಂದ ನನಗೆ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ. ವಿಶ್ವನಾಥಯ್ಯ ಹಾಗೂ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *