ಮಹಿಷಿ ಮಠದಲ್ಲಿ  ಚಿನ್ನ ಕಳ್ಳತನ, ಆರೋಪಿ  ವಶಕ್ಕೆ

ಮಹಿಷಿ ಮಠದಲ್ಲಿ  ಚಿನ್ನ ಕಳ್ಳತನ
  ಆರೋಪಿ ಶಿವಮೊಗ್ಗದ ರಾಘವೇಂದ್ರ ಆಚಾರ್ಯ  ವಶಕ್ಕೆ
ತೀರ್ಥಹಳ್ಳಿ: ತಾಲೂಕಿನ ಮಹಿಷಿಯ  ಉತ್ತರಾದಿ ಮಠದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಕೇವಲ ಒಂದೇ ದಿನದಲ್ಲಿ ಪೊಲೀಸರು ಪ್ರಕರಣಕ್ಕೆ ಅಂತ್ಯ ಹಾಡಿ ಒಂದು ಕೋಟಿ ಮೌಲ್ಯದ ಮಾಲಿನ ಜೊತೆಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಅಂದಾಜು ಮೌಲ್ಯ ೦೧ ಕೋಟಿ ೧ ಲಕ್ಷದ ೪೦ ಸಾವಿರ ರೂ. ಗಳ ೭೮೦ ಗ್ರಾಂ ತೂಕದ ಬಂಗಾರದ ೧೬ ಹಲಗಾರತಿಗಳನ್ನು ಕಳವು ಮಾಡಲಾಗಿತ್ತು. ಪ್ರಕರಣ ಬೆನ್ನತ್ತಿದ್ದ ಮಾಳೂರು ಪೊಲೀಸ್ ಠಾಣೆಯ ಪೊಲೀಸರು ಶಿವಮೊಗ್ಗದ ಗಾಂಧಿನಗರದ ೨೫ ವರ್ಷದ ರಾಘವೇಂದ್ರ ಆಚಾರ್ಯ ಬಿನ್ ವಿಜಯೇಂದ್ರ ಆಚಾರ್ಯ ಎಂಬಾತನನ್ನು ವಶಕ್ಕೆ ಪಡೆದು ಕಳ್ಳತನ ಮಾಡಿದ್ದ ಮಾಲು ವಶಕ್ಕೆ ಪಡೆದಿದ್ದಾರೆ..

Leave a Reply

Your email address will not be published. Required fields are marked *