ಡಾ. ಶರತ್ ಮರಿಯಪ್ಪ ಫೌಂಡೇಶನ್ ವತಿಯಿಂದ ಭಾನುವಾರ ನಡೆಯಲಿರುವ ರನ್ ಮಲೆನಾಡು 2026 ಪೋಸ್ಟರ್ ಅನ್ನು ಆದಿಚುಂಚನಗಿರಿ ಶಾಖ ಮಠದ ಶ್ರೀ ನಾದಮಯಾನಂದ ಸ್ವಾಮೀಜಿ ಬಿಡುಗಡೆ ಗೊಳಿಸಿ ಶುಭಕೋರಿದರು,
ಉತ್ತಮ ಪರಿಸರಕ್ಕಾಗಿ, ಅರೋಗ್ಯಕ್ಕಾಗಿ, ಉತ್ತಮ ನಾಳೆಗಳಿಗಾಗಿ ಓಟ ಎನ್ನುವ ಪರಿಕಲ್ಪನೆಯಲ್ಲಿ ರನ್ ಮಲೆನಾಡು -2026 ಕಾರ್ಯಕ್ರಮ ಆಯೋಜಿಸಲಾಗಿದೆ,
ನಾಲ್ಕು ವಿಭಾಗದಲ್ಲಿ ಓಟದ ಸ್ಪರ್ಧೆ ಆಯೋಜಿಸಿದ್ದು 3 ಕಿ ಮೀ 16 ವರ್ಷ ಒಳಗಿನ ಬಾಲಕ , ಬಾಲಕಿಯರ ವಿಭಾಗ , 5 ಕಿ ಮೀ ಓಟ 20 ವರ್ಷಒಳಗಿನ ಬಾಲಕ ಬಾಲಕಿಯರ ವಿಭಾಗ , 10 ಕಿ ಮೀ ಪ್ರೊಫೆಷನಲ್ ಕ್ರೀಡಾ ಪಟುಗಳ ಓಟ ಮಹಿಳಾ ಮತ್ತು ಪುರಷ ವಿಭಾಗ ಹಾಗೂ ನಾನ್ ಪ್ರೊಫೆಷನಲ್ 5 ಕಿ ಮೀ ಪುರುಷ , ಮಹಿಳಾ ವಿಭಾಗ ದಲ್ಲಿ ಆಯೋಜಿಸಲಾಗಿದೆ , ವಿಜೇತ ಓಟಗಾರರಿಗೆ ಆಕರ್ಷಕ ಬಹುಮಾನ ಮತ್ತು ಉಡುಗರೆ ನೀಡಲಿದ್ದಾರೆ .
ಸ್ಪರ್ಧೆಯು ಜೂಲೈ 5 ರ ಭಾನುವಾರ ಬೆಳಿಗ್ಗೆ 6 ಗಂಟೆಗೆ ನೆಹರು ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ .
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ – 8971397714, 8892325558, 8660461910 ಸಂಪರ್ಕಿಸಲು ಕೋರಲಾಗಿದೆ ..
ಕಾರ್ಯಕ್ರಮದಲ್ಲಿ ಡಾ. ಶರತ್ ಮರಿಯಪ್ಪ, ಕೆ ರಂಗನಾಥ್, ಎಂ ಪ್ರವೀಣ್ ಕುಮಾರ್, ವಿನಯ್ ತಾಂಡ್ಲೆ, ವಿನೋದ್, ವಿಜಯ್, ಭರತ್ ಶೇಖರ್,ಬಸಣ್ಣ ರಾಜೇಶ್,ನವೀನ್,ಪ್ರದೀಪ್,ಅವಿನಾಶ್, ರಾಜು, ಪುನೀತ್ , ಸಂದೀಪ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು ..


