ಬೊಮ್ಮನಕಟ್ಟೆಯ ಮನೆಯೊಂದಲ್ಲಿ ಕಳ್ಳತನ , 3 ದಿನಗಳಲ್ಲಿ ಆರೋಪಿತರು ಮತ್ತು ಮಾಲು ಪತ್ತೆ

ಶಿವಮೊಗ್ಗ ಜಿಲ್ಲೆಯ ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಆಶ್ರಯ ಬಡಾವಣೆ, ಬೊಮ್ಮನಕಟ್ಟೆಯ ಮನೆಯೊಂದಲ್ಲಿ ಕಳ್ಳತನವಾದ ಸಂಬಂಧ,ದಿನಾಂಕ: 17-06-2026 ರಂದು *ಗುನ್ನೆ ನಂ. 122/2026 ಕಲಂ: 331(3),331(4), 305 ಬಿ.ಎನ್.ಎಸ್ ರೀತ್ಯ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆಗಾಗಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಸಂಜೀವ್ ಕುಮಾರ್ ಟಿ, ಡಿವೈಎಸ್ ಪಿ ಶಿವಮೊಗ್ಗ – ಬಿ ಉಪವಿಭಾಗ ರವರ ಸೂಚನೆಯಂತೆ, ವಿನೋಬನಗರ ಪೊಲೀಸ್ ನಿರೀಕ್ಷಕರಾದ ಶ್ರೀ ಸಂತೋಷ್ ಕುಮಾರ್ ಡಿ.ಕೆ, ಸಬ್ ಇನ್ಸ್ಪೆಕ್ಟರ್ ಶ್ರೀ ತಿರುಮಲೇಶ್ ಜಿ ಹಾಗೂ ಸಿಬ್ಬಂದಿಗಳಾದ ರಾಜು ಕೆ ಆರ್,ಮಲ್ಲಪ್ಪ ಎಸ್ ಜಿ, ಅರುಣಕುಮಾರ್, ಮನುಶಂಕರ್ ರವರನ್ನು ಒಳಗೊಂಡ ವಿಶೇಷ ತಂಡವನ್ನು ರಚನೆ ಮಾಡಿ ಆರೋಪಿಗಳನ್ನು ವಿಶೇಷ ಮಾಹಿತಿ ಆಧರಿಸಿ ಪತ್ತೆ ಹಚ್ಚಲಾಗಿ,
ಕಳ್ಳತನ ನಡೆಸಿದ ಆರೋಪಿತ 1) ರವಿ ಬಿನ್ ಬೆಕ್ಕುಬಿನ್ ಉಮೇಶ್ ನಾಯ್ಕ್, 27 ವರ್ಷ 2) ಗಣೇಶ್ ಬಿನ್ ಗಣಿ ಬಿನ್ ಮಹೇಂದ್ರ , ಇಬ್ಬರೂ ವಾಸ ಆಶ್ರಯ ಬಡಾವಣೆ, ಶಿವಮೊಗ್ಗ ರವರನ್ನು ವಶಕ್ಕೆ ಪಡೆದು ಆರೋಪಿ ಕಳ್ಳತನ ಮಾಡಿದ್ದ 51 ಗ್ರಾಂ ತೂಕದ ಬಂಗಾರದ ಆಭರಣಗಳು ಅಂದಾಜು ಮೌಲ್ಯ-6,00,000/- ರೂ ಹಾಗೂ 27 ಗ್ರಾಂ ತೂಕದ ಬೆಳ್ಳಿಯ ಬಳೆ ಅಂದಾಜು ಮೌಲ್ಯ-4,000/- ರೂ ,ಒಟ್ಟು ಮೌಲ್ಯ= 6,04,000/- ರೂ ಅಮಾನತ್ತು ಪಡಿಸಿಕೊಂಡು ತನಿಖೆಯನ್ನು ಮುಂದುವರೆಸಲಾಗಿರುತ್ತದೆ. ಈ ಬಗ್ಗೆ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಆಧೀಕ್ಷಕರು ಅಭಿನಂದಿಸಿರುತ್ತಾರೆ.
ಶಿವಮೊಗ್ಗ ವಿನೋಬನಗರ ಪೊಲೀಸರಿಂದ ಮನೆಗಳ್ಳತನ ಪ್ರಕರಣದ 3 ದಿನಗಳಲ್ಲಿ ಆರೋಪಿತರು ಮತ್ತು ಮಾಲು ಪತ್ತೆ ಮಾಡಲಾಗಿದೆ..

Leave a Reply

Your email address will not be published. Required fields are marked *