ಆರೋಪಿ ಕಾಲಿಗೆ ಗುಂಡು , SP ನಿಖಿಲ್ ಭೇಟಿ , ಪರಿಶೀಲನೆ ..

ಆರೋಪಿ ಕಾಲಿಗೆ ಗುಂಡು , SP ನಿಖಿಲ್ ಭೇಟಿ , ಪರಿಶೀಲನೆ ..
ಶಿವಮೊಗ್ಗ ಜಿಲ್ಲೆ ದೊಡ್ಡಪೇಟೆ ಪೊಲೀಸ್ ಠಾಣೆ ಗುನ್ನೆ ನಂ : 236/2026 u/s 103(1) BNS ರಲ್ಲಿ ಆರೋಪಿ ಪತ್ತೆಗಾಗಿ ಪಿ.ಐ. ದೊಡ್ಡಪೇಟೆ ಹಾಗೂ ಸಿಬ್ಬಂದಿರವರು ತೆರಳಿದಾಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಾಜಪೇಯಿ ಬಡಾವಣೆಯಲ್ಲಿ ಆರೋಪಿ ಕಿಶೋರ್ 26 ವರ್ಷ ದಸ್ತಗಿರಿ ಮಾಡಲು ಹೋದಾಗ ಆರೋಪಿ ಕಿಶೋರನಿಗೆ ಪಿ ಐ ದೊಡ್ಡಪೇಟೆ ರವರು ಶರಣಾಗುವಂತೆ ಎಚ್ಚರಿಕೆ ನೀಡಿದರು ತನ್ನ ಬಳಿ ಇದ್ದ ಚಾಕುವಿನಿಂದ ಸಿಬ್ಬಂದಿ ಗಣೇಶ್ CPC-1070 ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿರುತ್ತಾನೆ.
ಪಿ ಐ ದೊಡ್ಡಪೇಟೆ ರವರು ಸಿಬ್ಬಂದಿರವರ ರಕ್ಷಣೆಗಾಗಿ ಒಂದು ಸುತ್ತು ಗುಂಡನ್ನು ಗಾಳಿಯಲ್ಲಿ ಹಾರಿಸಿ ಎಚ್ಚರಿಕೆ ನೀಡಿದರು ಶರಣಾಗದೆ ಇದ್ದಾಗ ಮತ್ತೊಂದು ಸುತ್ತು ಗುಂಡನ್ನು ಆರೋಪಿ ಕಿಶೋರನ ಎಡಗಾಲಿಗೆ ಹಾರಿಸಿದ್ದು ತಕ್ಷಣ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ತಿಳಿಸಿದ್ದು, ಇಲಾಖಾ ವಾಹನದಲ್ಲಿಯೇ ಸಿಬ್ಬಂದಿ ಗಣೇಶ್ ಹಾಗೂ ಆರೋಪಿ ಕಿಶೋರನನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

Leave a Reply

Your email address will not be published. Required fields are marked *