ಶಿವಮೊಗ್ಗ: ‘ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಬಲಪಡಿಸುವ ಜೊತೆಗೆ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಎಚ್. ಸಿ.ಯೋಗೇಶ್ ಭರವಸೆ ನೀಡಿದರು.
ಸೋಮವಾರ ಗಣೇಶ ಚತುರ್ಥಿ ದಿನ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾರ್ಯಕರ್ತ-‘ಸಂಘಟನೆ. ರೊಂದಿಗೆ ಬೆರೆಯುವ ರೀತಿ ಹಾಗೂ ಜವಾಬ್ದಾರಿ ನಿರ್ವಹಿಸುವ ಬಗ್ಗೆ ಹಲವು ವಿಷಯಗಳನ್ನು ಪಕ್ಷದ ನಾಯಕರಿಂದ ಕಲಿಯಲು ಸಾಧ್ಯವಾಗಿದೆ. ರಾಜಕೀಯ ಹಿನ್ನೆಲೆ, ಕುಟುಂಬದ ಬೆಂಬಲ ಇವೆಲ್ಲವೂ ಆರಂಭಿಕ ಹೆಜ್ಜೆಗೆ ನೆರವಾಗಬಹುದು. ಆದರೆ, ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನವನ್ನು ಪಡೆಯಲು ಹಾಗೂ ಅದನ್ನು ಸಮರ್ಥವಾಗಿ ನಿರ್ವಹಿಸಲು ಕಠಿಣ ಪರಿಶ್ರಮ, ಸಾಮರ್ಥ್ಯ ಮತ್ತು ಪಕ್ಷದ ಮೇಲಿನ ನಿಷ್ಠೆಯೇ ಪ್ರಮುಖ
ಕಾಂಗ್ರೆಸ್ನಲ್ಲಿ ಯುವಕರಿಗೆ ಆದ್ಯತೆ ನೀಡಲಾಗುತ್ತಿದೆ. ಕಾರ್ಯಕರ್ತರು ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಮುಂಬರುವ ಚುನಾವಣೆಗೆ ಈಗಿನಿಂದಲೇ ಸಿದ್ಧತೆ
ಮಾಡಿಕೊಳ್ಳಬೇಕು ಬಲ್ಲೀಶ್ಬಾನು, ವಿಧಾನ ಪರಿಷತ್ ಸದಸ್ಯ
ಮಾನದಂಡ’ ಎಂದು ಸ್ಪಷ್ಟಪಡಿಸಿದರು. ‘ಯುವಕರಿಗೆ ಪಕ್ಷದಲ್ಲಿ ಉತ್ತಮ ಅವಕಾಶಗಳಿವೆ. ಅದನ್ನು ಸದುಪ ಯೋಗಪಡಿಸಿಕೊಳ್ಳಲು ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳ. ಬೇಕು’ ಎಂದರು.
ಅಧಿಕಾರ ಹಸ್ತಾಂತರಿಸಿದ ನಿಕಟಪೂರ್ವ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್ ಮಾತನಾಡಿ, ‘ಅಯ್ಕೆಯಲ್ಲಿ ಯಾರೊಬ್ಬರ ವೈಯಕ್ತಿಕ ಒಲವು.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಿಕಟಪೂರ್ವ ಅಧ್ಯಕ್ಷ ಆರ್ಪ್ರಸನ್ನಕುಮಾರ್ ಅವರಿಂದ ಪಕ್ಷದ ಧ್ವಜ ಸ್ವೀಕರಿಸುವ ಮೂಲಕ ನೂತನ ಅಧ್ಯಕ್ಷರಾಗಿ ಎಚ್.ಸಿ.ಯೋಗೀಶ್ ಅಧಿಕಾರ ಸ್ವೀಕರಿಸಿದರು
ಶಿಫಾರಸ್ಸಿಗೆ ಅವಕಾಶ ನೀಡದೆ, ಮಾಡಲಾಗಿದೆ’ ಎಂದರು. ಪಕ್ಷದ ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯಕ್ಕೆ ಆದ್ಯತೆ ನೀಡುವ ಹೊಸ ಸಂಘಟನಾ ವ್ಯವಸ್ಥೆಯನ್ನು ಕೆಪಿಸಿಸಿ ಜಾರಿಗೆ ತಂದಿದೆ. ಆ ಮೂಲಕ ಎಚ್. ಸಿ. ಯೋಗೇಶ್ ಅವರನ್ನು ನೇಮಕ
‘ಜಿಲ್ಲಾ ಕಾಂಗ್ರೆಸ್ನ ಮುಂದಿನ ಸಂಘಟನಾ ಕಾರ್ಯದಲ್ಲಿ ಭಿನ್ನಾ-ಭಿಪ್ರಾಯಗಳಿಗೆ ಅವಕಾಶ ನೀಡದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸು-
ವುದು ಮುಖ್ಯ. ಹಿರಿಯರ ಅನುಭವ ಹಾಗೂ ಯುವಕರ ಉತ್ಸಾಹವನ್ನು ಸಮನ್ವಯಗೊಳಿಸಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಜವಾಬ್ದಾರಿ ಹೊಸ ನಾಯಕತ್ವದ ಮೇಲಿದೆ’ ಎಂದು ಕಿವಿ ಮಾತು ಹೇಳಿದರು.
ರಾಜ್ಯ ಜವಳಿ ನಿಗಮದ ಅಧ್ಯಕ್ಷ ಚೇತನಗೌಡ, ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶ್ವೇತಾ ಬಂಡಿ, ಜಿಲ್ಲಾ ಘಟಕದ ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಪ್ರಮುಖರಾದ ಇಸ್ಮಾಯಿಲ್ ಖಾನ್, ಚಂದ್ರಭೂಪಾಲ್, ಡಾ.ಶ್ರೀನಿವಾಸ ಕರಿಯಣ್ಣ, ಎಸ್.ರವಿಕುಮಾರ್, ಹಾಪ್ಕಾಮ್ಸ್ ಅಧ್ಯಕ್ಷ ವಿಜಯ್ಕುಮಾರ್ (ದನಿ), ಎಸ್.ಪಿ.ದಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಕುಮಾರ್ ಮತ್ತು ಕಲೀಂಪಾಶ, ಮುಖಂಡರಾದ ನೇತ್ರಾವತಿ ಗೌಡ, ಕೆ.ರಂಗನಾಥ್, ಶರತ್ ಮರಿಯಪ್ಪ,ಯೂನಸ್ ಖಾನ್ , ಎಚ್.ಪಿ.ಗಿರೀಶ್ ಹಿಂದುಳಿದ ಕಾಂಗ್ರೆಸ್ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್ ಶಂಕರ್ಘಟ್ಟ, ಪ್ರಮುಖರಾದ ಆರ್.ರಾಜಶೇಖರ್, ಸೂಡಾ ಸದಸ್ಯ ಎಂ.ಎನ್.ಸಿದ್ದಪ್ಪ, ಕಲಗೋಡು ರತ್ನಾಕರ್. ಯು.ಶಿವಾನಂದ್ ಹಾಜರಿದ್ದರು.





