ಗೌರಿ-ಗಣೇಶ ಹಬ್ಬದ ಸಂಭ್ರಮ; ಮಾರುಕಟ್ಟೆಯಲ್ಲಿ ಜನ ಸಾಗರ

ಗೌರಿ-ಗಣೇಶ ಹಬ್ಬದ ಸಂಭ್ರಮ; ಮಾರುಕಟ್ಟೆಯಲ್ಲಿ ಜನ ಸಾಗರ
ಶಿವಮೊಗ್ಗ: ಗೌರಿ-ಗಣೇಶನ ಸ್ವಾಗತಕ್ಕೆ ಭರ್ಜರಿ ಸಿದ್ಧತೆ

ಶಿವಮೊಗ್ಗ: ಗೌರಿ- ಗಣೇಶನ ಸ್ವಾಗತಕ್ಕೆ ಶಿವಮೊಗ್ಗ ನಗರ ಸಂಭ್ರಮದಿಂದ ಸಜ್ಜಾಗಿದೆ. ಶನಿವಾರದಿಂದಲೇ ಗಣಪನನ್ನು ಕರೆತರಲು ಸಿದ್ಧತೆಗಳು ನಡೆದಿದ್ದು, ಮಾರುಕಟ್ಟೆಯೂ ಜನರಿಂದ ಗಿಜಿಗುಡುತ್ತಿತ್ತು. ಗಣೇಶನ ಮೂರ್ತಿ ಹಾಗೂ ಹಬ್ಬಕ್ಕೆ ಅಗತ್ಯವಿರುವ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದರು.
ಶಿವಮೊಗ್ಗ ನಗರದ ಗಾಂಧಿ
ಮುಖ್ಯಾಂಶಗಳು
ಕೋಡುಬಳೆ, ಕಡುಬು, ಉಂಡೆಗಳು, ಸಿಹಿ ತಿನಿಸುಗಳ ತಯಾರಿ
ಆಕರ್ಷಕ ಗಣಪತಿ ಪೆಂಡಾಲ್, ಮಂಟಪಗಳ ನಿರ್ಮಾಣ
ಬಜಾ‌ರ್, ನೆಹರು ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ, ಬಿ.ಎಚ್. ರಸ್ತೆಯಲ್ಲಿ
ಜನದಟ್ಟಣೆ ಹೆಚ್ಚಾಗಿದ್ದು, ಹಬ್ಬಕ್ಕೆ ಹೂ- ಊರಿಗೆ ಹಣ್ಣು ಮತ್ತು ಪೂಜಾ ಸಾಮಗ್ರಿಗಳ ಖರೀದಿಯ ದೃಶ್ಯ ಕಂಡುಬಂತು. ದಿನಸಿ ಅಂಗಡಿ, ಬಟ್ಟೆ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ಕಂಡುಬಂದಿತು.
ಪ್ರತಿ ಬಡಾವಣೆಗಳಲ್ಲೂ ಗಣಪತಿ ಕೂರಿಸಲು ತಯಾರಿ ನಡೆಯುತ್ತಿದ್ದು, ಮನೆಗಳಲ್ಲೂ ಗೌರಿ-ಗಣೇಶನ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಲವು ಕಡೆ ಆಕರ್ಷಕ ಗಣಪತಿ ಪೆಂಡಾಲ್ ಹಾಗೂ ಮಂಟಪಗಳನ್ನು ನಿರ್ಮಿಸಲಾಗಿದೆ. ಜೊತೆಗೆ ಚಕ್ಕುಲಿ, ಕೋಡುಬಳೆ, ಕಡುಬು, ಉಂಡೆಗಳು, ಸಿಹಿ ತಿನಿಸುಗಳ ತಯಾರಿ ಭರ್ಜರಿಯಾಗಿಯೇ ನಡೆದಿದೆ.
ಹಬ್ಬದ ಪ್ರಯುಕ್ತ ದೂರದ ಊರುಗಳಲ್ಲಿ ನೆಲೆಸಿರುವವರು
ಬರುತ್ತಿದ್ದಾರೆ. ಹೀಗಾಗಿ ರೈಲು, ಬಸ್ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಪೊಲೀಸ್ ಇಲಾಖೆ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಭದ್ರತೆ ಒದಗಿಸಿದೆ.
ಹಬ್ಬದ ಹಿನ್ನೆಲೆ ಹೂವು- ಹಣ್ಣುಗಳ ಬೆಲೆ ಗಗನಕ್ಕೇರಿತ್ತು. ಮಾರುಕಟ್ಟೆಯಲ್ಲಿ ಕೆ.ಜಿ ಸೇಬಿಗೆ ₹ 200, ದಾಳಿಂಬೆ ಕೆ.ಜಿಗೆ * 150, . 5 ₹ 200, ಮೋಸಂಬಿ ಕೆ.ಜಿ ಗೆ ₹ 80. ಕಿತ್ತಳೆ ಕೆ.ಜಿಗೆ * 200, ಬಾಳೆ ಹಣ್ಣಿಗೆ * 100 ದರ ನಿಗದಿ ಮಾಡಲಾಗಿತ್ತು. ವ್ಯಾಪಾರಸ್ಥರು ಎಲ್ಲ ಹಣ್ಣುಗಳನ್ನು ಕೂಡಿಸಿ ಪ್ಯಾಕೇಜ್ ರೂಪದಲ್ಲಿ ಪೂಜೆಗಾಗಿ ಸಿದ್ದಪಡಿಸಿದ್ದ ಬುಟ್ಟಿಗೆ ₹150 ದರ ನಿಗದಿಮಾಡಿದ್ದರು.
ಎರಡು ಬಾಳೆ ದಿಂಡಿಗೆ * 30, ಮಾವಿನ ತೋರಣಕ್ಕೆ ₹ 10 ನಿಗದಿ ಮಾಡಿದ್ದರು. ಮಲ್ಲಿಗೆ ಹೂವು ಒಂದು ಮಾರು ₹ 100, ಮೊಗ್ಗಿನ ಒಂದು ಹಾರಕ್ಕೆ ₹300, 8.25 25 200, ತೆಂಗಿನ ಕಾಯಿ ಬೆಲೆ 25 ಇತ್ತು.
ಇನ್ನೂ ತರಕಾರಿ ಬೆಲೆ ಕೂಡ ಅಲ್ಪ ಪ್ರಮಾಣದಲ್ಲಿ ಏರಿಕೆ ಆಗಿದೆ. ಕೆ.ಜಿ ಟೊಮೆಟೊಗೆ ₹20, ಕೆ.ಜಿ ಆಲೂಗಡ್ಡೆಗೆ * 40, ಹೀರೇಕಾಯಿ ಕೆ.ಜಿಗೆ * 60, ಸೌತೆಕಾಯಿ ಕೆ.ಜಿಗೆ ₹ 60, ಬೀಟ್ರೋಟ್ ಕೆ.ಜಿಗೆ ₹ 50, ಈರುಳ್ಳಿ ಬೆಲೆ ಕೆ.ಜಿಗೆ 60, ನುಗ್ಗೆಕಾಯಿ ಕೆ.ಜಿಗೆ ₹ 80 ಹಾಗೂ ಸೊಪ್ಪಿನ ಕಟ್ಟು ಒಂದಕ್ಕೆ ₹ 10 ಇತ್ತು. ಪೂಜಾ ಸಾಮಗ್ರಿಗಳ ಖರೀದಿಯೂ ಜೋರಾಗಿತ್ತು.

Leave a Reply

Your email address will not be published. Required fields are marked *