ಭಾರತ ವೈವಿದ್ಯತೆ ಸಾರುವ ಶ್ರೀಮಂತ ರಾಷ್ಟ್ರ : ಶಾಸಕ ಎಸ್ ಎನ್ ಚನ್ನಬಸಪ್ಪ

 

ಶಿವಮೊಗ್ಗ:ಭಾರತ ವೈವಿದ್ಯತೆ ಸಾರುವ ಶ್ರೀಮಂತ ರಾಷ್ಟ್ರ ಎಂದು ಶಾಸಕ ಎಸ್ ಎನ್ ಚನ್ನಬಸಪ್ಪ. ಹೇಳಿದರು.
ಅವರು ಶ‌ನಿವಾರ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಾಹಣಾ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಸಮರೋಪ ಭಾಷಣ ಮಾಡಿದರು.

ಭಾರತದಲ್ಲಿ ವಿವಿಧ ಸಾಂಸ್ಕೃತಿಕ ಪರಂಪರೆ ಗಳಿದ್ದು, ಎಲ್ಲರೂ ಸೇರಿ ಒಟ್ಟಾಗಿ ನಮ್ಮ ರಾಷ್ಟ್ರ ಕಟ್ಟಬೇಕಿದೆ,ಈ ಕಾಲೇಜಿನ ವಿವಿಧ ಘಟಕಗಳ ಚಟುವಟಿಕೆ ಗಳು ನಾಡಿನ ವೈವಿದ್ಯತೆಗೆ ಸಾಕ್ಷಿಯಾಗಿದೆ ಎಂದರು.
ಈ ಕಾಲೇಜಿಗೆ ರಾಜ್ಯದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಬರುತ್ತಿರುವುದು ಕಾಲೇಜಿನ ಹಿರಿಮೆ ಗರಿಮೆಯನ್ನು ಎತ್ತಿ ತೋರಿಸುತ್ತದೆ ಸಾವಿರಾರು ವಿದ್ಯಾರ್ಥಿಗಳಿಗೆ ಬದಕು ಕಟ್ಟಿ ಕೊಟ್ಟಿದೆ ಎಂದರು.

. ಶಾಸಕರಾಗಿ ತಾವು ಕಾಲೇಜಿನ ಸರ್ವಂಗಿಣ ಅಭಿವೃದ್ಧಿ ಗೆ ಸಹಾಯ ಮಾಡುವುದಾಗಿ ತಿಳಿಸಿ,ಅಂದಾಜು 35 ಲಕ್ಷ ರೂ ವೆಚ್ಚದಲ್ಲಿ ಮಲೆನಾಡ ಶೈಲಿಯಲ್ಲಿ ಕಾಲೇಜಿನ ಮುಂಭಾಗದಲ್ಲಿ ಮೇಲ್ಚಾವಣಿ ನಿರ್ಮಿಸಿ ಕೊಡುವುದಾಗಿ ಘೋಷಿಸಿದರು.

ಸಂಬಂಧ ಎಂಬುದು ದೊಡ್ಡದು ಎಂಬ ದೇವನೂರರ ಮಾತನ್ನು ಉಲ್ಲೆಖಿಸಿದ ನಿವೃತ್ತ ದೈಹಿಕ ನಿರ್ದೇಶಕ ಎ ಶಿವಮೂರ್ತಿ ಅವರು ಕ್ರೀಡೆ ಮಾನಸಿಕ ಮತ್ತು ದೈಹಿಕ ಸಮನ್ವಯವನ್ನು ಸಾದಿಸಲು ನೆರವಾಗುವ ಒಂದು ಪ್ರಕ್ರಿಯೆ ಎಂದು ತಿಳಿಸಿದರು.

ಮತ್ತೊರ್ವ ಮುಖ್ಯ ಅತಿಥಿ ಶ್ರೀಮತಿ ಶ್ರುತಿ ಅವರು ಭಾವಗೀತೆ ಗಳ ಪ್ರಾಮುಖ್ಯತೆಯನ್ನು ತಿಳಿಸಿ ಸುಶ್ರಾವ್ಯ ಗಾಯನದ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು.

ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಅವಿನಾಶ್ ಟಿ, ಅವರು ಕಾಲೇಜಿನ ಶೈಕ್ಷಣಿಕ ಪ್ರಗತಿ ಅತ್ಯುತ್ತಮವಾಗಿದೆ.ಶಾಸಕರು ಕಾಲೇಜಿಗೆ ನೆರವು ನೀಡು ವ ಭರವಸೆ ನೀಡಿದ್ದಾರೆ ಅವರಿಗೆ ಕೃತಜ್ಞತೆ ಗಳು ಎಂದರು.
ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ರಾಜೇಶ್ವರಿ ಎನ್, ಪ್ರಾದ್ಯಾಪಕರಾದ
ಸರಳ ಕೆ ಎಸ್, ಕುಂದನ್ ಬಸವರಾಜ್, ಮಮತಾ ಎಸ್ ಮ್, ವಿದ್ಯಾರ್ಥಿ ಕ್ಷೇಮಧಿಕಾರಿ ಗಿರಿಧರ್ ಕೆ ವಿ,. ಮರ್ಗನಹಳ್ಳಿ ಪ್ರಕಾಶ್, ವೀರಶೆಟ್ಟಿ ರಾಠೋಡ್, ಬಾಲಸ್ವಾಮಿ, ಲವ ಜಿ ಆರ್, ಶಶಿರಾಜ್ ಯು, ವಿದ್ಯಾರ್ಥಿ ಪ್ರತಿನಿಧಿಗಳಾದ ಸುದೀಪ್, ಉಜ್ಜಿನಿ ಗೌಡ ಮೊದಲಾದವರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.
ಸುಶ್ಮಿತಾ ಮತ್ತು ಮೇಘಾ ನಿರೂಪಿಸಿದರೆ, ಗಿರಿಧರ್ ಕೆ ವಿ, ಸಾಂಸ್ಕೃತಿಕ ವರದಿ ಹಾಗೂ ಶಶಿಕುಮಾರ್ ಕ್ರೀಡಾ ವರದಿ ವಾಚಿಸಿದರು. ಇದೆ ಸಂದರ್ಭದಲ್ಲಿ ಮ್ಯಾನೇಜ್ ಮೆಂಟ್ ಫೆಸ್ಟ್, ಹಾಗೂ ಕ್ರೀಡಾ ವಿಭಾಗದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಹಾಗೆಯೇ ಗ್ರಂಥಾಲಯಕ್ಕೆ ಹೆಚ್ಚು ಬಾರಿ ಭೇಟಿ ನೀಡಿ ಪುಸ್ತಕ ಎರವಲು ಪಡೆದ 08 ವಿದ್ಯಾರ್ಥಿ-ಸಿಬ್ಬಂದಿ ಗಳನ್ನು ವಿಶೇಷವಾಗಿ ಗುರುತಿಸಿ, ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *