ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಆಕ್ಸಫರ್ಡ್ ಇಂಗ್ಲಿಷ್ ಸ್ಕೂಲ್ ಗೆ ಶೇ. 100% ಫಲಿತಾಂಶ

2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಆಕ್ಸಫರ್ಡ್ ಇಂಗ್ಲಿಷ್ ಸ್ಕೂಲ್ ಗೆ ಶೇ. 100% ಫಲಿತಾಂಶ

ಶಿವಮೊಗ್ಗ ನಗರದ ಬಸವೇಶ್ವರ ನಗರದಲ್ಲಿರುವ ಆಕ್ಸಫರ್ಡ್ ಇಂಗ್ಲಿಷ್ ಸ್ಕೂಲ್ ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಶೇ. 100% ಫಲಿತಾಂಶದೊಂದಿಗೆ ಉತ್ತಮ ಸಾಧನೆ ಮಾಡಿದೆ. ಆಕ್ಸಫರ್ಡ್ ಇಂಗ್ಲಿಷ್ ಸ್ಕೂಲ್ ನ ವಿದ್ಯಾರ್ಥಿಗಳಾದ ವನಶ್ರೀ ಕುಮಾರ್ ಎಸ್, 618/625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 8ನೇ ಸ್ಥಾನಗಳಿಸಿದ್ದು, ಹೆಚ್. ಎಂ. ಇಂಚರ ( 96.96% ), ಸಾನ್ವಿ. ಎಸ್ ( 93.44 % ), ತಪಸ್ವಿ. ಎಸ್ . ಎಂ ( 93.12 % ), ತೇಜಸ್ವಿನಿ. ಸಿ ( 92.48 % ), ಅಕ್ಷರ್ ಎಸ್ ಗೌಡ ( 91.36 % ), ಹೇಮಂತ್. ಎಂ ( 91.36% ) ಸೇರಿದಂತೆ 14 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಹಾಗೂ 30 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಾಲೆಯ ಅಧ್ಯಕ್ಷರು , ಪ್ರಾಂಶುಪಾಲರು ಹಾಗೂ ಆಕ್ಸಫರ್ಡ್ ಸಮೂಹ ಶಿಕ್ಷಣ ಸಂಸ್ಥೆಗಳ ಎಲ್ಲಾ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.

Leave a Reply

Your email address will not be published. Required fields are marked *