‘ಗೋವರ್ಧನ ಶಿವಮೊಗ್ಗ’ ವಾರ್ಷಿಕೋತ್ಸವ; ಗೋ ಸೇವಾ ಸಂಭ್ರಮ ಆಚರಣೆ
ಗೋವಿನ ರಕ್ಷಣೆ ನಮ್ಮೆಲ್ಲರ ಹೊಣೆ : ಕನ್ನೇರಿ ಶ್ರೀ
ಶಿವಮೊಗ್ಗ ಮೀಡಿಯಾ
ಶಿವಮೊಗ್ಗ: ‘ಯಾವ ಮನೆಯಲ್ಲಿ ಅತಿ ಹೆಚ್ಚು ಗೋವುಗಳಿರುತ್ತವೆಯೋ ಆತನೇ ದೊಡ್ಡ ಶ್ರೀಮಂತ ಎಂಬ ಕಾಲವಿತ್ತು. ಅದು ಮತ್ತೆ ಬರಲಿದೆ. ವಿಶ್ವದ ಐಟಿ ದಿಗ್ಗಜರು ಕೂಡ ರೈತನ ಮನೆ ಬಾಗಿಲಿಗೆ ಹೋಗಿ ಆಹಾರಕ್ಕಾಗಿ ಬೇಡುವ ಕಾಲ ಬರಲಿದೆ’ ಎಂದು ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನುಡಿದರು.
ನಗರದ ಶುಭಮಂಗಳ ಸಮುದಾಯ ಭವನದಲ್ಲಿ ‘ಗೋವರ್ಧನ ಶಿವಮೊಗ್ಗ’ ಆಯೋಜಿಸಿದ್ದ ಗೋಸೇವಾ ಸಂಭ್ರಮದಲ್ಲಿ ಗೋವಿನ ವಿವಿಧ ತಳಿಗಳ ಪ್ರದರ್ಶನ, ಗೋ ಉತ್ಪನ್ನ ಮಾರಾಟ ಮಳಿಗೆ, ಪ್ರದರ್ಶಿನಿ, ಅಶ್ವ ಶಕ್ತಿ ಗೊಬ್ಬರ ಹಾಗೂ ಸಾವಯವ ಗೊಬ್ಬರ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಶ್ರೀಕೃಷ್ಣನ ಕಾಲದಲ್ಲಿ ಹಾಲು ಮಾರಾಟಕ್ಕೆ ಪ್ರತಿಬಂಧವಿತ್ತು, ಗೋವಿನ
ಹಾಲು ಮಕ್ಕಳು ಮತ್ತು ಕರುವಿಗೆ ಮಾತ್ರ ಬಳಕೆಯಾಗಿತ್ತು, ಮಿಕ್ಕ ಹಾಲಿನಲ್ಲಿ ತುಪ್ಪ ಮಾಡಿ ಮಥುರಾದಿಂದ ಬಲೂಚಿಸ್ತಾ ನದವರೆಗೆ ವಿವಿಧ ದೇಶಗಳಿಗೆ ತುಪ್ಪ ಪೂರೈಸುವ ದೊಡ್ಡ ಉದ್ಯಮವಿತ್ತು’ ಎಂದು ಹೇಳಿದರು.
ಗೋವುಗಳ ‘ಐದು లక్ష ಹೊಂದಿದ್ದರೆ ಆತನನ್ನು ಉಪನಂದ, 10 ಲಕ್ಷ ಗೋವುಗಳಿದ್ದರೆ ಆತನನ್ನು ನಂದ, 13 ಲಕ್ಷ ಗೋವುಗಳಿದ್ದರೆ ವೃಷಭ ಎಂದು ಕರೆಯುತ್ತಿದ್ದರು. 10 ಜನ ನಂದರಿದ್ದರೆ ಗೋಕುಲ ಎನ್ನುತ್ತಿದ್ದರು. ಅಷ್ಟೂ ಜನರು ಒಂದು ಗೋವರ್ಧನ ಶಿಖರದ ತಪ್ಪಲಿನಲ್ಲಿ ವಾಸವಾಗಿದ್ದರು ಎಂದರೆ ದೇಶದ ಗೋ ಸಂಪತ್ತು ಎಷ್ಟಿತ್ತು ಎಂದು ಊಹಿಸಬಹುದು’ ಎಂದು ಇತಿಹಾಸ ತೆರೆದಿಟ್ಟರು.
‘ಹಿಂದೆ ಹಸು ಇದ್ದ ಮನೆಗೆ ಹೆಣ್ಣನ್ನು ಕೊಡುತ್ತಿದ್ದರು. ಈಗ ಐಷಾರಾಮಿ ಜೀವನಕ್ಕೆ ಮಾರು ಹೋಗಿ ಹಸು ಇದ್ದ ಮನೆಗೆ ಪೋಷಕರು ಹೆಣ್ಣು ಶಿವಮೊಗ್ಗದಲ್ಲಿ ಕೊಡುವುದಿಲ್ಲ. ಈ ದೇಶದಲ್ಲಿ ಶೇ 42 ಜನರಿಗೆ ಕೃಷಿ ಮತ್ತು ಹೈನುಗಾರಿಕೆ ಉದ್ಯೋಗ ನೀಡಿದೆ. ಇದನ್ನು ಯಾವುದೇ ಕೈಗಾರಿಕೆ ಕೊಡಲು ಸಾಧ್ಯವಿಲ್ಲ
ಇನ್ನಿತರ ಬೆಳೆಗಳಿಗೆ ಪ್ರಯೋಜನವಾಗುತ್ತದೆ. ಒಂದು ಗಿಡದ ಕೆಳಗೆ ಹಸು ಕಟ್ಟಿದರೆ ಅದು ಒಂದು ದಿನದಲ್ಲಿ ಹಾಕುವ ಗೊಬ್ಬರ ಆ ಗಿಡವನ್ನು ಒಂದು ವರ್ಷ ಕಾಯುತ್ತದೆ,ಭೂಮಿ ಬಲಿಷ್ಠವಾಗುತ್ತದೆ’ ಎಂದರು.
ಕಾರ್ಯಕ್ರಮದಲ್ಲಿ ನಗರದ ನಾಲ್ಕು ಗೋಶಾಲೆಗಳ ಮುಖ್ಯಸ್ಥರನ್ನು ಸನ್ಮಾನಿ-ಸಲಾಯಿತು. ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಗೋವರ್ಧನ ಟ್ರಸ್ಟ್ ಪ್ರಮುಖರಾದ ಉಮೇಶ್ ಆರಾಧ್ಯ, ಎಂ.ನಾಗೇಶ್, ರಮೇಶ್ ಬಾಬು, ಎಸ್.ಕೆ. ಶೇಷಾಚಲ, ಗುರುಶೇಶ್, ಜಯಸ್ವಾಮಿ, ರಂಗನಾಥ್, ಗುರುಗುಹ ನಾಗರಾಜ್, ರುದ್ರಾರಾಧ್ಯ, ವಿನೋದ್ ಕುಮಾರ್
ಗೋಸಂರಕ್ಷಣೆ ಸವಾಲಿನ ಕೆಲಸ. ಗೋವುಗಳ ನಾಶದ ಪ್ರಕ್ರಿಯೆಪರಾಕಷ್ಠೆಗೆ ತಲುಪಿದ ಸಂದರ್ಭದಲ್ಲಿ ಗೋವರ್ಧನ ಟ್ರಸ್ಟ್ ನಗರದಲ್ಲಿ ಕಳೆದೊಂದು ವರ್ಷದಿಂದ ಗೋವಿನ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ
ಕೃಷ್ಣಪ್ರಸಾದ್, ರಾಮಚಂದ್ರಾಪುರಮರ
ಗೋವುಗಳ ಸೇವೆ, ಬಡ
ವಿದ್ಯಾರ್ಥಿಗಳಿಗೆ ನೆರವು, ಸಾವಯವ ಕೃಷಿಗೆ ಗೋವರ್ಧನ ಟ್ರಸ್ಟ್ ಒತ್ತು ನೀಡಿದೆ. ಗೋ ಸಂರಕ್ಷಣೆಗೆ ಆಂಬುಲೆನ್ಸ್, ಮೇವಿನ ಉತ್ಪಾದನೆ, ವಿಶ್ವಬಂಧು ಗೋಶಾಲೆ ನಿರ್ಮಾಣ, ಈಗ ಗೋ ಉತ್ಪನ್ನಗಳು, ಸಾವಯವ ಕೃಷಿಗೆ ಆದ್ಯತೆ ನೀಡಿದೆ ಕೆ.ಇ.ಕಾಂತೇಶ್, ಗೋವರ್ಧನ ಟ್ರಸ್ಟ್ ಅಧ್ಯಕ್ಷ
ಜೈನ್, ಇ. ವಿಶ್ವಾಸ್, ಉಮಾ ಮೂರ್ತಿ, ಸೀತಾರಾಮ್, ಶ್ರೀಕಾಂತ್ ಇದ್ದರು.


