ದರ್ಶನ್ ಪತ್ನಿ ವಿಜಯಲಕ್ಷ್ಮಿ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್: ಮಾಫಿ ಸಾಕ್ಷಿ ಪ್ರಶ್ನಿಸುವ ಅಧಿಕಾರ ಇಲ್ಲ! ಡಿ ಬಾಸ್‌ಗೆ ಹಿನ್ನಡೆ

ದರ್ಶನ್ ಪತ್ನಿ ವಿಜಯಲಕ್ಷ್ಮಿ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್: ಮಾಫಿ ಸಾಕ್ಷಿ ಪ್ರಶ್ನಿಸುವ ಅಧಿಕಾರ ಇಲ್ಲ! ಡಿ ಬಾಸ್‌ಗೆ ಹಿನ್ನಡೆ

ಹೊಸದಿಲ್ಲಿ: ರೇಣುಕಾಸ್ವಾಮಿಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ನಟ ದರ್ಶನ್‌ ಅವರಿಗೆ ಮತ್ತೊಂದು ಹಿನ್ನೆಡೆಯಾಗಿದೆ. ಪ್ರದೂಷ್‌ ಮಾಫಿ ಸಾಕ್ಷಿ ರದ್ದುಗೊಳಿಸುವಂತೆ ಕೋರಿ ಪತ್ನಿ ವಿಜಯಲಕ್ಷ್ಮೀ ಸಲ್ಲಿಸಿದ್ದ ಅರ್ಜಿಯನ್ನು, ಸುಪ್ರೀಂಕೋರ್ಟ್‌ ಇಂದು (ಅ.8-ಗುರುವಾರ) ವಜಾ
ಮಾಫಿ ಸಾಕ್ಷಿಯನ್ನು ಪ್ರಶ್ನಿಸುವ ಅಧಿಕಾರ ಆರೋಪಿ ಕಡೆಯವರಿಗೆ ಇಲ್ಲ ಎಂದಿರುವ ಸುಪ್ರೀಂಕೋರ್ಟ್‌, ಈ ಕುರಿತು ವಿಜಯಲಕ್ಷ್ಮೀ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು. ಈ ಮೂಲಕ ಮಾಫಿ ಸಾಕ್ಷಿಯಿಂದ ಮುಕ್ತಿ ಪಡೆಯುವ ದರ್ಶನ್‌ ಅವರ ಕೊನೆಯ ಅವಕಾಶವೂ ಕೈತಪ್ಪಿದಂತಾಗಿದೆ.\

ವಿಜಯಲಕ್ಷ್ಮೀ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್‌ ನ್ಯಾಯಾಮೂರ್ತಿ ಪರ್ದಿವಾಲಾ ಹಾಗೂ ನ್ಯಾ.ವಿನೋದ್ ಚಂದ್ರನ್ ನೇತೃತ್ವದ ದ್ವಿಸದಸ್ಯ ಪೀಠ, “ಆರೋಪಿ ಕಡೆಯವರಿಗೆ ಮಾಫಿ ಸಾಕ್ಷಿಯನ್ನು ಪ್ರಶ್ನಿಸುವ ಅಧಿಕಾರ ಇಲ್ಲ” ಎಂದು ನೇರವಾಗಿ ಹೇಳಿತು.

Leave a Reply

Your email address will not be published. Required fields are marked *