ಶಿವಮೊಗ್ಗ : ಮಂಟರಘಟ್ಟ ಮೂಲದ ಪೊಲೀಸ್ ಮಂಜಪ್ಪ (H.C) ತಂಡದಿಂದ 2 ಲಕ್ಷ ಮೌಲ್ಯದ ಬಂಗಾರದ ಒಡವೆಗಳು ಮತ್ತು 60 ಸಾವಿರ ರೂ ನಗದು ವಾರಸುದಾರರಿಗೆ ಹಸ್ತಾಂತರ

ದಿನಾಂಕ: 06/10/2026 ರಂದು ಚಿಕ್ಕ ಮಗಳೂರು ಜಿಲ್ಲೆ ತರಿಕೆರೆ ತಾಲ್ಲೂಕ್ ಅಲಸೂರು ಗೇಟ್ ಮೂಲದ ಮಹಿಳೆಯು ಶಿವಮೊಗ್ಗದಿಂದ ತರಿಕೆರೆಗೆ ಪ್ರಯಾಣಿಸುವ ಸಮಯದಲ್ಲಿ 2 ಲಕ್ಷ ಮೌಲ್ಯದ ಬಂಗಾರದ ಒಡವೆಗಳು ಮತ್ತು 60 ಸಾವಿರ ರೂ ನಗದು ಹಣ ಹಾಗು ಮೊಬೈಲ್ ಇರುವ ಬ್ಯಾಗನ್ನು ಖಾಸಗಿ ಬಸ್ ನಲ್ಲಿಯೇ ಬಿಟ್ಟು ಇಳಿದಿರುತ್ತಾರೆ.

   ಈ ಬಗ್ಗೆ ಸದರಿ ಮಹಿಳೆಯು ದೊಡ್ಡಪೇಟೆ ಪೊಲೀಸ್ ಠಾಣೆಗೆ ಸಂಪರ್ಕಿಸಿದ್ದಾಗ ಕೂಡಲೇ ಕಾರ್ಯ ಪ್ರೌವೃತ್ತರಾದ ಶ್ರೀ ಮಂಜಪ್ಪ ಹೆಚ್ಸಿ ಮತ್ತು ಶ್ರೀ ಚಂದ್ರನಾಯ್ಕ ಪಿಸಿ ರವರು ಖಾಸಗಿ ಬಸ್ ಅನ್ನು ಪತ್ತೆ ಹಚ್ಚಿ, ಮಹಿಳೆ ಬಿಟ್ಟಿದ್ದ ಬ್ಯಾಗ್ ನ್ನು ಮರಳಿ ತಂದು ಮಹಿಳೆಗೆ ಹಿಂದಿರುಗಿಸಿರುತ್ತಾರೆ.

Leave a Reply

Your email address will not be published. Required fields are marked *