ರವೀಂದ್ರನಗರ ಶ್ರೀ ಪ್ರಸನ್ನ ಗಣಪತಿ ಬಲಮುರಿ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ 26ರವರೆಗೆ 15 ದಿನಗಳ ಶರನ್ನವರಾತ್ರೋತ್ಸವದ ವೈಭವ

ರವೀಂದ್ರನಗರ ಶ್ರೀ ಪ್ರಸನ್ನ ಗಣಪತಿ ಬಲಮುರಿ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ 26ರವರೆಗೆ 15 ದಿನಗಳ ಶರನ್ನವರಾತ್ರೋತ್ಸವದ ವೈಭವ

ನಿತ್ಯ ಚಂಡಿಕಾ ಯಾಗ, ದೇವಿ ಭಾಗವತ ಪ್ರವಚನ ಸಪ್ತಾಹ, ಭಜನಾ ಕಾರ್ಯಕ್ರಮ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಉತ್ಸವ

ಶಿವಮೊಗ್ಗ: ನಗರದ ರವೀಂದ್ರನಗರದಲ್ಲಿರುವ ಶ್ರೀ ಪ್ರಸನ್ನ ಗಣಪತಿ ಬಲಮುರಿ ದೇವಸ್ಥಾನದ ಆವರಣದಲ್ಲಿ ಶ್ರೀ ಪ್ರಸನ್ನ ಗಣಪತಿ ಬಲಮುರಿ ದೇವಸ್ಥಾನ ಅಭಿವೃದ್ಧಿ ದತ್ತಿ (ರಿ.) ಶಿವಮೊಗ್ಗ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಯ ನಿರ್ಮಿತ ಆಶ್ರಯದಲ್ಲಿ ಈ ಬಾರಿಯ ಶ್ರೀ ಶರನ್ನವರಾತ್ರೋತ್ಸವವನ್ನು ಅಕ್ಟೋಬರ್ 11ರಿಂದ 26ರವರೆಗೆ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲಾಗುತ್ತಿದೆ.

ಲೋಕಕಲ್ಯಾಣ, ಧರ್ಮಜಾಗೃತಿ, ಭಕ್ತಿ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಉದ್ದೇಶದಿಂದ ಆಯೋಜಿಸಲಾಗಿರುವ ಈ ಉತ್ಸವದಲ್ಲಿ ನಿತ್ಯ ಪೂಜೆ, ಅರ್ಚನೆ, ಪಾರಾಯಣ, ಚಂಡಿಕಾ ಯಾಗ, ಭಜನೆ, ದೇವಿ ಭಾಗವತ ಪ್ರವಚನ ಹಾಗೂ ನಾಡಿನ ಹೆಸರಾಂತ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

Leave a Reply

Your email address will not be published. Required fields are marked *