ಸೀರೆಹಬ್ಬಕ್ಕೆ ಕೆ.ಎಸ್. ಈಶ್ವರಪ್ಪ ಚಾಲನೆ
ಶಿವಮೊಗ್ಗ : ಮೈಸೂರು ಸಿಲ್ಕ್ ಕ್ರೇಪ್ ಸೀರೆ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ನಟಿ ಕಾರುಣ್ಯ ಬೃಹತ್ ಸೀರೆಹಬ್ಬ ಮಾಡುವುದರ ಮೂಲಕ ಹೆಣ್ಣು ಮಕ್ಕಳಿಗೆ ಸ್ವ-ಉ ದ್ಯೋಗ ಮಾಡಲು ಸ್ಫೂರ್ತಿಯಾಗಿ ದ್ದಾರೆ. ಇಂದಿನಿಂದ 3 ದಿನಗಳ ಕಾಲ ರಾಯಲ್ ಆರ್ಕೇಡ್‌ನಲ್ಲಿ ನಡೆಯುವ ಈ ಸೀರೆ ಹಬ್ಬದಲ್ಲಿ ಭಾಗವಹಿಸಿ, ಪ್ರೋತ್ಸಾಹಿಸುವಂತೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ
ಹೇಳಿದ್ದಾರೆ.
ಅವರು ಇಂದು ನಗರದ ರಾಯ್ ಲ್ ಆರ್ಕೇಡ್‌ನಲ್ಲಿ ಸೆಂಟರ್ ನಲ್ಲಿ ‘ಅವಿರಾ ಉಡುಪು’ ಸಂಸ್ಥೆಯಿಂದ ಹಮ್ಮಿಕೊಂಡಿದ್ದ 2 ದಿನಗಳ ಸೀರೆ ಹಬ್ಬ ಉದ್ಘಾಟಿಸಿ ಮಾತನಾಡಿದರು.
ಇವತ್ತಿನ ಈ ಸೀರೆಹಬ್ಬದಲ್ಲಿ ತುಂಬಾ ಕಲೆಕ್ಷನ್‌ಗಳಿದ್ದು ಮಹಿಳೆ
ಯರಿಗೆ ಒಂದು ನಿಜವಾದ ಹಬ್ಬವಾ ಗಿದೆ. ಸೀರೆಗಳು ಹೆಣ್ಣು ಮಕ್ಕಳಿಗೆ ಸ್ಫೂರ್ತಿ ತುಂಬುತ್ತದೆ. ಭಾರತೀಯ ಸಂಸ್ಕೃತಿಯ ಪ್ರತೀಕವೂ ಹೌದು.
ಹೆಣ್ಣು ಮಕ್ಕಳಿಗೆ ಮಾತ್ರ ಅವರಿಗೆಬೇಕಾದ ಸೆಲೆಕ್ಷನ್ ಗೊತ್ತಾಗುತ್ತದೆ.
ಅವರೇ ಖುದ್ದಾಗಿ ಬಂದು ಯುಗಾದಿ ಹಬ್ಬಕ್ಕೆ ತಮಗೆ ಬೇಕಾದ ಸೀರೆಯನ್ನು
ಆಯ್ಕೆಮಾಡುವಂತೆ ಮತ್ತು ಈ ಸೀರೆಹಬ್ಬ ಯಶಸ್ವಿಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಟಿ ಕಾರುಣ್ಯಗೌಡ, ಸಮನ್ವಯ ಕಾಶಿ, ಮಮತಾ ಶಿವಣ್ಣ, ಉಮಾದೇವಿ, ಡಾ.ರಘುನಂದನ್, ಈ. ವಿಶ್ವಾಸ್ ಸೇರಿದಂತೆ ಹಲವರಿದ್ದರು.


