ಶಿವಮೊಗ್ಗ ನಗರದಲ್ಲಿ ಮೊನ್ನೆ ಸುರಿದ ಬಾರಿ ಅಕಾಲಿಕ ಮಳೆಯಿಂದಾಗಿ ಟ್ಯಾಂಕ್ ಮೊಹಲ್ಲಾ ಭಾಗದ 2 ರಿಂದ 8 ಕ್ರಾಸ್ ನ ವರೆಗೂ ಮನೆಯೊಳಗೆ ನೀರು ನುಗ್ಗೆ ನಾಗರಿಕರಿಗೆ ಆದಂತಹ ಸಮಸ್ಯೆಯಿಂದ ಇಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಅಧಿಕಾರಿಗಳಾದ AEE ಶ್ರೀಮತಿ ಪುಷ್ಪವತಿ ಅವರು ಮತ್ತು AE ಹಾಲೇಶಪ್ಪನವರು ಹಾಗೂ JE ಮಧು ನಾಯ್ಕ್ ಅವರುಗಳನ್ನು ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಯತ ಎಂ.ಎಸ್. ಶಿವಕುಮಾರ್ ರವರು ಸ್ಥಳಕ್ಕೆ ಕರೆಸಿ ಮಳೆಯಿಂದಾಗಿ ತೊಂದರೆಗೀಡಾದ ಮನೆಗಳಿಗೆ ಭೇಟಿ ನೀಡಿ ಕುಂದು ಕೊರತೆ ವಿಚಾರಿಸಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿದರು ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷರಾದ ನಿಖಿಲ್ ರವರು, ಹಾಗೂ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು


