ಪಿಯುಸಿ ಸಾಧಕರಿಗೆ ಎಂ. ಶ್ರೀಕಾಂತ್ ಅಭಿನಂದನೆ

ಪಿಯುಸಿ ಸಾಧಕರಿಗೆ ಎಂ. ಶ್ರೀಕಾಂತ್ ಅಭಿನಂದನೆ..

ಶಿವಮೊಗ್ಗ: ಛಲವಿದ್ದರ  ಜೀವನದಲ್ಲಿ ಸಾಧನೆ ಸಾಧ್ಯ. ಸಾಧನೆಗೆ ಏನೇನು ಬೇಕೋ ಅದೆಲ್ಲವೂ ನಮ್ಮೊಳಗೆ ಇದೆ. ನಾವು ಶ್ರದ್ದೆಯಿಂದ ನಿರಂತರ ಪರಿಶ್ರಮಿಸಿದರೆ ಸಾಧನೆ ಸಾಧ್ಯ ಎಂದು ಸದ್ಭಾವನ ಟ್ರಸ್ಟ್‌ನ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರು ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್ ಹೇಳಿದರು.
ಅವರು ಇಂದು ಬೆಳಗ್ಗೆ ಸದ್ಭಾವನ ಟ್ರಸ್ಟ್‌ನಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಬೃಂದಾ 590(98.33), ರಂಜಿತಾ ಜಿ 596(99.33), ಎನ್.ಎನ್. ವಶಿಷ್ಟ 595 (99.17), ಮಹಿನ್ ಖಾನಂ ಆಫ್ರಿದಿ 596 (99.33) ಹಾಗೂಸೋನಿಯಾ ಅವರ ಮನೆಗೆ ಭೇಟಿ ನೀಡಿ ಈ ಸಾಧಕರನ್ನು ಅಭಿನಂದಿಸಿ ಮಾತನಾಡಿದರು.

ಸಾಧನೆ ಮಾಡಿದವರನ್ನು ಗುರುತಿಸಿ ಶುಭಹಾರೈಸುವ ಜೊತೆಗೆ ಸನ್ಮಾನಿಸಿ ಪ್ರೇರಣೆ ನೀಡಿದರೆ ಅವರು ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಉತ್ತಮವಾಗಿ ಅಧ್ಯಯನ ಮಾಡಿ ಉನ್ನತ ಹುದ್ದೆ ಅಲಂಕರಿಸಬೇಕೆಂದು ಹೇಳಿದರು.

ಪಾಲಿಕೆ ಮಾಜಿ ಸದಸ್ಯರಾದ ಯಮುನಾ ರಂಗೇಗೌಡ, ಶಿವಮೊಗ್ಗ ಯುವ ಕಾಂಗ್ರೆಸ್ ಮುಖಂಡ ವಿನಯ್ ತಾಂಪ್ಲೆ, ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯ ಬಸವರಾಜ ಹಾಗೂ ಮಂಜುನಾಥ್ ನವುಲೆ, ಸಂದೀಪ್, ಶಿವಕುಮಾರ್, ಅನಿಲ್ ಆಚಾರ್, ಭರತ್, ಅವಿನಾಶ್, ಕುರುವಳ್ಳಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *