ಸಿಂಹಧಾಮದಲ್ಲಿ ನೀರುಕುದುರೆ ದಾಳಿ : ಡಾ.ಸಮೀಕ್ಷಾ ರೆಡ್ಡಿ ಸಾವು

ಸಿಂಹಧಾಮದಲ್ಲಿ ನೀರುಕುದುರೆ ದಾಳಿ : ಡಾ.ಸಮೀಕ್ಷಾ ರೆಡ್ಡಿ ಸಾವು
ಶಿವಮೊಗ್ಗ, ಮಾ.20 : ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿ ಗರ್ಭಿಣಿ ನೀರುಕುದುರೆಯನ್ನು ಪರೀಕ್ಷಿಸಲು ತೆರಳಿದ್ದ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿಯವರ ಮೇಲೆ ನೀರುಕುದುರೆ ಆಕಸ್ಮಿಕವಾಗಿ ದಾಳಿ ನಡೆಸಿದ್ದು, ಶಿವಮೊಗ್ಗದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತçಚಿಕಿತ್ಸೆಗೆ ಒಳಗಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮಾ.20 ರ ಬೆಳಿಗ್ಗೆ 6.30 ಕ್ಕೆ ಮೃತಪಟ್ಟಿರುತ್ತಾರೆ.
ಡಾ.ಸಮೀಕ್ಷಾ ರೆಡ್ಡಿ, 27 ವರ್ಷ, ಬೆಂಗಳೂರು ಇವರು ಪಶು ವೈದ್ಯಾಧಿಕಾರಿಯಾಗಿ ಆಯ್ಕೆಯಾಗಿ ಮೃಗಾಲಯದ ಪಶುವೈದ್ಯರಿಂದ ತರಬೇತಿ ಪಡೆಯುತ್ತಿದ್ದರು. ಅವರು ಮಾ.19 ರಂದು ರಾತ್ರಿ 10.30 ಕ್ಕೆ ಮೃಗಾಲಯದ ಆಸ್ಪತ್ರೆಗೆ ತೆರಳಿ ಸನ್ ಕೊನ್ಯೂರ್ ಪಕ್ಷಿಗೆ ಫಾಲೊ ಅಪ್ ಚಿಕಿತ್ಸೆ ನೀಡಿದ್ದರು. ನಂತರ ರಾತ್ರಿ 11.45 ಕ್ಕೆ ಥರ್ಮಲ್ ಕ್ಯಾಮೆರಾ ಬಳಸಿ ಗರ್ಭಿಣಿ ನೀರು ಕುದರೆಯ(ಹಿಪ್ಪೊಪೊಟಮಸ್) ತಾಪಮಾನ ಪರೀಕ್ಷಿಸುವ ವೇಳೆ ನೀರುಕುದುರೆ ದಾಳಿ ನಡೆಸಿತ್ತು ಎಂದು ಹುಲಿ-ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *