* ಡಾ!! ಸಮೀಕ್ಷಾ ಸಾವಿಗೆ ಕಾರಣರಾದವರಿಗೆ ಸೂಕ್ತ ಶಿಕ್ಷೆ ಆಗಲಿ
*
ಶಿವಮೊಗ್ಗ: ಹುಲಿ ಮತ್ತು
ಸಿಂಹಧಾಮದ ಮೃಗಾಲಯದಲ್ಲಿ ಕರ್ತವ್ಯದ ಮೇಲಿದ್ದ ಡಾ.ಸಮೀಕ್ಷಾ ರೆಡ್ಡಿ ಅವರ ಸಾವಿಗೆ ಕಾರಣರಾದವರಿಗೆ ಸೂಕ್ತ ಶಿಕ್ಷೆ ಆಗಬೇಕೆಂದು ಶಿವಮೊಗ್ಗ ಜಿಲ್ಲಾ ಪಶು ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ಕೆಂಡೇಶ್ ಆಗ್ರಹಿಸಿದ್ದಾರೆ.
ಸೋಮವಾರ ಶಿವಮೊಗ್ಗ ಪ್ರೆಸ್ ಟ್ರಸ್ಟ್ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಯುವ ವೈದ್ಯೆ ಡಾ. ಸಮೀಕ್ಷಾ ರೆಡ್ಡಿಯರವರು ತಮ್ಮ ಆಸಕ್ತಿ ಮೇರೆಗೆ ಈ ಕೆಲಸಕ್ಕೆ ಬಂದಿದ್ದರು. ಇಂತಹ ಯುವ ವೈದ್ಯೆಯನ್ನು ಕಳೆದುಕೊಂಡಿದ್ದೇವೆ. ಒಬ್ಬ ಸೇವಾನಿರತ ಯುವ ಪಶುವೈದ್ಯೆಯ ಅಕಾಲಿಕ ಮರಣ ನಮ್ಮಲ್ಲಿ ಅನುಮಾನ ಹಾಗೂ ಅತೀವ ನೋವನ್ನುಂಟು ಮಾಡಿದೆ ಎಂದರು.
ಅರಣ್ಯ ಇಲಾಖೆಯಲ್ಲಿ ತರಬೇತಿ ಪಡೆಯುತ್ತಿದ್ದ ವೈದ್ಯೆಯ ಸಾವು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ತರಬೇತಿ ಅವಧಿಯಲ್ಲಿದ್ದ ಪಶು ವೈದ್ಯೆಯನ್ನು ರಾತ್ರಿ 11 ಗಂಟೆಗೆ ಯಾವುದೇ ಸುರಕ್ಷಾ ವ್ಯವಸ್ಥೆಗಳಿಲ್ಲದೆ ಕಳುಹಿಸಿದ್ದು ಅಪರಾಧ. ಕೇವಲ ವಾಹನ ಚಾಲಕನೊಂದಿಗೆ ನೀರಾನೆ ತಪಾಸಣೆಗೆ ಕಳುಹಿಸಿದ್ದು ಹುಲಿ ಮತ್ತು ಸಿಂಹಧಾಮದ ಅಧಿಕಾರಿಗಳ ಲೋಪವಾಗಿದೆ ಎಂದು ಆರೋಪಿಸಿದರು.
ಹ್ಯಾಂಡ್ಲರ್ ಹಾಗೂ ಯೂನಿಫಾರ್ಮ್ ಧರಿಸಿರುವ ಸಿಬ್ಬಂದಿ ಜೊತೆಯೇ ಹೋಗಿ ಕೇಜ್ನ ಬಾಗಿಲು ತೆರೆಯಬೇಕು. ಮೇಲ್ನೋಟಕ್ಕೆ ಅಲ್ಲಿಯ ಕಾರ್ಯ ವ್ಯವಸ್ಥೆಯಲ್ಲಿನ ಲೋಪಗಳನ್ನು ಎತ್ತಿ ತೋರಿಸುತ್ತಿದೆ. ವನ್ಯಜೀವಿ ವಿಭಾಗದಲ್ಲಿ ಅವುಗಳ ಪಾಲನೆ, ಪೋಷಣೆ, ಉಪಚಾರ, ಚಿಕಿತ್ಸೆ, ಸಾಗಣೆ ಸಂಬಂಧ ವನ್ಯಜೀವಿ ವಿಭಾಗ ಎಡವಿದೆ. ವನ್ಯಜೀವಿ ವಿಭಾಗದಲ್ಲಿ ಕಟುವಾದ ನಿಯಮಗಳಿವೆ. ವನ್ಯಜೀವಿಗಳ ಆರೋಗ್ಯ ನಿರ್ವಹಣೆಗೆ 24×7 ನುರಿತ ವನ್ಯಜೀವಿ ತಜ್ಞರ ಸೇವೆಯನ್ನು ಮೃಗಾಲಯವು ಹೊಂದಿರಲೇಬೇಕು ಎಂದು ತಿಳಿಸಿದರು.
ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪಶುವೈದ್ಯರು ಈಗಾಗಲೇ ತಮ್ಮ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮೃಗಾಲಯವನ್ನು ಕಾರ್ಯನಿರ್ವಾಹಕ ನಿರ್ದೇಶಕರೊಬ್ವರೇ ಹೇಗೆ ನಡೆಸುತ್ತಿದ್ದಾರೆ. ಇಲ್ಲಿ ಪಶು ವೈದ್ಯಾಧಿಕಾರಿಗಳು ಕಳೆದ ನವೆಂಬರ್ನಲ್ಲಿಯೇ ರಾಜೀನಾಮೆ ನೀಡಿದ್ದಾರೆ. ಅವರನ್ನು ಇಲ್ಲಿನ ಕಾರ್ಯನಿರ್ವಾಹಕ ನಿರ್ದೇಶಕರು ಹೊಸದಾಗಿ ಬಂದ ಟ್ರೈನಿ ವೈದ್ಯರಿಗೆ ಟ್ರೈನಿಂಗ್ ನೀಡಲು ಉಳಿಸಿಕೊಂಡಿದ್ದಾರೆ. ಅಲ್ಲದೆ, ಡಾ. ಸಮೀಕ್ಷಾ ಅವರನ್ನು ಒಂಟಿಯಾಗಿ ಹೇಗೆ ವನ್ಯಜೀವಿಗಳ ಚಿಕಿತ್ಸೆಗೆ ಕಳಿಸುತ್ತಾರೆ. ಮೃಗಾಲಯದ ಮೇಲಾಧಿಕಾರಿಗಳ ಉದಾಸೀನತೆ ಹಾಗೂ ನಿರ್ಲಕ್ಷ್ಯತನದಿಂದ ಡಾ. ಸಮೀಕ್ಷಾ ರೆಡ್ಡಿಯವರ ಪ್ರಾಣ ಹೋಗಿದೆ ಎಂದು ಡಾ. ಕೆಂಡೇಶ್ ದೂರಿದರು.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಲೇಬೇಕು. ಮೃಗಾಲಯದಲ್ಲಿದ್ದ ಕೆಲವು ಲೋಪದೋಷಗಳ ಬಗ್ಗೆ ಡಾ. ಸಮೀಕ್ಷಾ ಬೆಳಕಿಗೆ ತರುತ್ತಿದ್ದರು. ಹೀಗಾಗಿ ಅವರನ್ನು ಕೇಜ್ಗೆ ಕಳಿಸಿರಬಹುದೆಂಬ ಅನುಮಾನವಿದೆ. ಸಮೀಕ್ಷಾ ಅವರಿಗೆ ರಜೆ ಸಹ ನೀಡದೇ ಕಿರುಕುಳ ಕೊಡಲಾಗಿತ್ತು. ಈ ಎಲ್ಲದರ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಈ ವೇಳೆ ಜಿಲ್ಲಾ ಪಶು ವೈದ್ಯಕೀಯ ಸಂಘದ ಸದಸ್ಯರು

