ಸಹ್ಯಾದ್ರಿ ಕ್ರಿಕೆಟ್ ಅಕಾಡಮಿ ವತಿಯಿಂದ ಬೇಸಿಗೆ ಕ್ರಿಕೆಟ್ ಶಿಬಿರ

 

ಸಹ್ಯಾದ್ರಿ ಕ್ರಿಕೆಟ್ ಅಕಾಡಮಿ ವತಿಯಿಂದ ಬೇಸಿಗೆ ಕ್ರಿಕೆಟ್ ಶಿಬಿರ..
ಶಿವಮೊಗ್ಗ: ಸಹ್ಯಾದ್ರಿ ಕ್ರಿಕೆಟ್ ಅಕಾಡಮಿ ವತಿಯಿಂದ 12ನೇ ವರ್ಷದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಈ ಶಿಬಿರವು ಏಪ್ರಿಲ್ 1ರಿಂದ ಒಂದು ತಿಂಗಳ ಕಾಲ ನಡೆಯಲಿದೆ. ನುರಿತ ಹಾಗೂ ಅನುಭವಿ ತರಬೇತುದಾರರಾದ ಶ್ರೀ ಪಿ.ವಿ. ನಾಗರಾಜ್ ಹಾಗೂ ಹಿರಿಯ ಕ್ರೀಡಾಪಟುಗಳ ನೇತೃತ್ವದಲ್ಲಿ ಶಿಬಿರವನ್ನು ನಡೆಸಲಾಗುತ್ತದೆ.
ಈ ತರಬೇತಿ ಶಿಬಿರವು 10 ರಿಂದ 19 ವರ್ಷದೊಳಗಿನ ಬಾಲಕರು ಹಾಗೂ ಬಾಲಕಿಯರಿಗೆ ಆಯೋಜಿಸಲಾಗಿದೆ. ಅಕಾಡೆಮಿಯಲ್ಲಿ ತರಬೇತಿ ಪಡೆದ ಅನೇಕ ಯುವಕರು ಹಾಗೂ ಯುವತಿಯರು ಜಿಲ್ಲೆ, ವಿಭಾಗ, ರಾಜ್ಯ, ರಾಷ್ಟ್ರ ಮಟ್ಟ ಹಾಗೂ ಅಂತರ ವಿಶ್ವವಿದ್ಯಾಲಯ ಮತ್ತು KSCA ಲೀಗ್ ತಂಡಗಳಲ್ಲಿ ಆಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ಶಿಬಿರದ ಅವಧಿಯಲ್ಲಿ ಪ್ರತಿಭಾವಂತ ಆಟಗಾರರನ್ನು ಗುರುತಿಸಿ, ವರ್ಷಪೂರ್ತಿ ನಡೆಯುವ ವಿಶೇಷ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುತ್ತದೆ.
ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀ ಪಿ.ವಿ. ನಾಗರಾಜ್ (ತರಬೇತುದಾರರು)
📞 9964599936
ಅಥವಾ ಪ್ರತಿದಿನ ಬೆಳಿಗ್ಗೆ 6:30 ರಿಂದ 8:30 ರವರೆಗೆ ಹಾಗೂ ಸಂಜೆ 4:30 ರಿಂದ 6:30 ರವರೆಗೆ ಸಹ್ಯಾದ್ರಿ ಕ್ರಿಕೆಟ್ ಅಕಾಡಮಿ, ಸಹ್ಯಾದ್ರಿ ಕಾಲೇಜ್ ಕ್ರೀಡಾಂಗಣದಲ್ಲಿ ಸಂಪರ್ಕಿಸಬಹುದು.

Leave a Reply

Your email address will not be published. Required fields are marked *